15 ವರ್ಷದ ಮಗಳನ್ನು ಪ್ರಿಯಕರನಿಂದ ಅತ್ಯಾಚಾರ ಮಾಡಿಸಿದ ದುಷ್ಟ ತಾಯಿ
ಚೆನ್ನೈ: ತಮ್ಮ ಹೆಣ್ಣು ಮಕ್ಕಳನ್ನು ಕಾಮುಕರಿಂದ ರಕ್ಷಿಸಲು ಅಮ್ಮಂದಿರು ಚಿಂತಿಸುವಷ್ಟು ಬೇರೆಯಾರೂ ಚಿಂತಿಸಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬಳು ದುಷ್ಟ ತಾಯಿ ತನ್ನ ಪ್ರಿಯಕರನಿಂದಲೇ 15 ವರ್ಷದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅತ್ಯಾಚಾರ ನಡೆಸಿದ್ದಾಳೆ.
ತಮಿಳುನಾಡಿನ ಮಹಾಬಲಿಪುರಂ ಬಳಿಯ ಶೋಲಿಂಗನಲ್ಲೂರಿನ ದುಷ್ಟ ಮಹಿಳೆ ಈ ಕೃತ್ಯ ಎಸಗಿದವಳಾಗಿದ್ದಾಳೆ. ಗಂಡನಿಂದ ಬೇರ್ಪಟ್ಟಿದ್ದ ಆಕೆ ತನ್ನ 15 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು. ಆ ಬಳಿಕ ಹಲವು ಸಂಬಂಧಗಳ ನಂತರ ವ್ಯಕ್ತಿಯೋರ್ವನ ಪರಿಚಯವಾಗಿದ್ದು, ಆತ ದಿನವೂ ಈಕೆಯ ಮನೆಗೆ ಬಂದು ಹೋಗುತ್ತಿದ್ದ. ಇದೇ ಸಂದರ್ಭದಲ್ಲಿ ಆತನ ಕಣ್ಣು, ಈಕೆಯ 15 ವರ್ಷದ ಮಗಳ ಮೇಲೆ ಬಿದ್ದಿದೆ.
ಆತ ನಿನ್ನ ಮಗಳ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು ಎಂದು ಆಕೆಯನ್ನು ಒತ್ತಾಯಿಸಿದ್ದಾನೆ. ಆಕೆ ಇದಕ್ಕೆ ಒಪ್ಪದೇ ಇದ್ದಾಗ, ನಾನು ನಿನ್ನ ಜೊತೆಗೆ ಇನ್ನು ಸಂಬಂಧದಲ್ಲಿರುವುದಿಲ್ಲ ಎಂದು ಹೇಳಿದ್ದಾನೆ. ಆತನ ಸಂಬಂಧದಿಂದ ದೂರವಿರಲು ಇಷ್ಟಪಡದ ಆಕೆ ಆತನ ದುಷ್ಟ ಕೃತ್ಯಕ್ಕೆ ಸಹಕರಿಸಿದ್ದಾಳೆ.
ತಾಯಿಯ ಕೃತ್ಯ ಮಗಳಿಗೆ ತಿಳಿಯುತ್ತಿದ್ದಂತೆಯೇ ಆಕೆ ತಾಯಿಯ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಈ ವೇಳೆ ತಾಯಿ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ತನ್ನ ಪ್ರಿಯಕರನಿಂದ ನಿರಂತರವಾಗಿ ಅತ್ಯಾಚಾರ ನಡೆಸಲು ಕಾರಣಳಾಗಿದ್ದಾಳೆ.
ಅತ್ಯಾಚಾರದ ಪರಿಣಾಮ ಬಾಲಕಿ ತನ್ನ 15ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾಗಿದ್ದಾಳೆ. ಇದೇ ಸಂದರ್ಭದಲ್ಲಿ ಬಾಲಕಿಯ ದೈಹಿಕ ಬದಲಾವಣೆಯನ್ನು ಗಮನಿಸಿದ ಆಕೆಯ ಮಾವ, ಮಹಿಳೆಯ ಸಹೋದರ ಬಾಲಕಿಯನ್ನು ವಿಚಾರಿಸಿದ್ದು, ಈ ವೇಳೆ ಮಹಿಳೆಯ ಕೃತ್ಯ ಬೆಳಕಿಗೆ ಬಂದಿದೆ.
ಬಾಲಕಿಯ ಮಾವ ಇದೀಗ ಪೊಲೀಸ್ ಠಾಣೆಗೆ ತೆರಳಿ ಬಾಲಕಿಯ ತಾಯಿ ಹಾಗೂ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಪ್ರಿಯಕರ ಹಾಗೂ ಮಹಿಳೆ ಪರಾರಿಯಾಗಿದ್ದಾರೆ. 15 ವರ್ಷದ ಬಾಲಕಿ ಇದೀಗ ತನ್ನ ತಾಯಿಯ ದುಷ್ಕೃತ್ಯದಿಂದಾಗಿ 15ನೇ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.