15 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಅಮೀರ್ ಖಾನ್ - ಪತ್ನಿ ಕಿರಣ್ ರಾವ್ - Mahanayaka
6:31 PM Wednesday 5 - February 2025

15 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಅಮೀರ್ ಖಾನ್ – ಪತ್ನಿ ಕಿರಣ್ ರಾವ್

aamir khan kiran
03/07/2021

ಮುಂಬೈ:  ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಅವರೊಂದಿಗಿನ 15 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದ್ದು, ವಿವಾಹ ವಿಚ್ಛೇದನ ಘೋಷಿಸಿದ್ದಾರೆ.  ಈ ದಂಪತಿಗೆ ಆಜಾದ್ ರಾವ್ ಖಾನ್ ಎಂಬ ಓರ್ವ ಪುತ್ರ ಕೂಡ ಇದ್ದಾನೆ.

15 ವರ್ಷಗಳಲ್ಲಿ ನಾವು ಸಂತೋಷ ಮತ್ತು ನಗುವನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು,  ಇನ್ನು ಮುಂದೆ ಗಂಡ-ಹೆಂಡತಿ ಅಲ್ಲ, ಆದರೆ ಪರಸ್ಪರ ಸಹ-ಪೋಷಕ ಕುಟುಂಬವಾಗಿ ಎಂದು ಅಮೀರ್ ಮತ್ತು ಕಿರಣ್ ಜಂಟಿ ಹೇಳಿಕೆ ನೀಡಿದ್ದಾರೆ.

ನಾವು ನಮ್ಮ ಮಗ ಆಜಾದ್ ಗೆ ಸಮರ್ಪಿತ ಪೋಷಕರಾಗಿ ಉಳಿದಿದ್ದೇವೆ, ಅವನನ್ನು ನಾವು ಒಟ್ಟಿಗೆ ಪೋಷಿಸುತ್ತೇವೆ ಮತ್ತು ಬೆಳೆಸುತ್ತೇವೆ. ನಾವು ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳಲ್ಲಿ ಸಹಯೋಗಿಗಳಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಅಮೀರ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು ಆದರೆ 2002 ರಲ್ಲಿ 16 ವರ್ಷಗಳ ವಿವಾಹದ ನಂತರ ವಿಚ್ಛೇದನ ಪಡೆದರು. ರೀನಾ ದತ್ತಾ ಅವರೊಂದಿಗಿನ ಮೊದಲ ಮದುವೆಯಿಂದ ಅವರಿಗೆ ಮಗಳು ಇರಾ ಮತ್ತು ಮಗ ಜುನೈದ್ ಎಂಬ ಮಕ್ಕಳಿದ್ದಾರೆ.

ಇತ್ತೀಚಿನ ಸುದ್ದಿ