1,500 ಬಾತುಕೋಳಿಗಳನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು! - Mahanayaka
10:24 AM Sunday 15 - December 2024

1,500 ಬಾತುಕೋಳಿಗಳನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು!

duck
19/04/2021

ಕೇರಳ:  ಸುಮಾರು 1,500 ಬಾತುಕೋಳಿಗಳನ್ನು ಬೀದಿ ನಾಯಿಗಳು ಕೊಂದು ಹಾಕಿರುವ ಘಟನೆ ಕೇರಳದ ಪಾಲಂಗನಾಡು ಕದಂದ್ರಾಯರ್ ಬಳಿಯಲ್ಲಿ ನಡೆದಿದ್ದು, ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಪಾಲಂಗನಾಡು ಮೂಲದ ಜೋಸ್ ಒಡೆತನದಲ್ಲಿ ನಡೆಯುತ್ತಿದ್ದ ಬಾತುಕೋಳಿ ಸಾಕಣಿಕಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಇಲ್ಲಿನ ನಿವಾಸಿಗಳು ವಾಕಿಂಗ್ ಹೋದ ವೇಳೆ ನಾಯಿ ಬೊಗಳುವುದು ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ.

ಈ ವೇಳೆ ಐದು ನಾಯಿಗಳು ಬಾತುಕೋಳಿಯ ಪಂಜರದೊಳಗೆ ಇಳಿದು ಮನಬಂದಂತೆ ಕಚ್ಚಿ ಸಾಯಿಸುತ್ತಿರುವುದು ಕಂಡು ಬಂದಿದೆ. ತಕ್ಷಣವೇ ನಾಯಿಗಳನ್ನು ಅವರು ಓಡಿಸಿದ್ದಾರೆ. ಈ ಪಂಜದಲ್ಲಿ ಸುಮಾರು 2500 ಬಾತುಕೋಳಿಗಳನ್ನು ಸಾಕಲಾಗುತ್ತಿತ್ತು. ಈ ಪೈಕಿ 1500 ಬಾತುಕೋಳಿಗಳನ್ನು ನಾಯಿಗಳು ಕಚ್ಚಿ ಸಾಯಿಸಿವೆ.

ಜೋಸ್ ಅವರು ಸಾಂಪ್ರದಾಯಿಕ ಬಾತುಕೋಳಿಗಳನ್ನು ಸಾಕುತ್ತಿದ್ದರು. ಹಲವು ವರ್ಷಗಳಿಂದ ಬಾತುಕೋಳಿಗಳ ಮೊಟ್ಟೆಗಳ ವ್ಯಾಪಾರಕ್ಕಾಗಿ ಬಾತುಕೋಳಿಯನ್ನು ಸಾಕುತ್ತಿದ್ದರು.  ಇದೀಗ 1,500 ಬಾತುಕೋಳಿಗಳ ಮಾರಣಹೋಮದಿಂದಾಗಿ ಅವರು ಕಂಗೆಟ್ಟಿದ್ದಾರೆ. ಇವರಿಗೆ ಸುಮಾರು 3 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ಸುದ್ದಿ