ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು! - Mahanayaka
4:39 AM Tuesday 10 - December 2024

ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು!

neha
23/07/2021

ಲಕ್ನೋ: ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷ ವಯಸ್ಸಿನ ಬಾಲಕಿಯನ್ನು ಆಕೆಯ ಚಿಕ್ಕಪ್ಪ ಹಾಗೂ ಅಜ್ಜ ಸೇರಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ.

16 ವರ್ಷ ವಯಸ್ಸಿನ ನೇಹಾ ಹತ್ಯೆಗೊಳಗಾದವಳಾಗಿದ್ದಾಳೆ. ಈಕೆ ಲೂದಿಯಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಲ್ಲಿ ಜೀನ್ಸ್ ಬಟ್ಟೆಗಳನ್ನು ಹಾಕಿ ಅಭ್ಯಾಸವಾಗಿತ್ತು. ಆದರೆ, ತನ್ನ ಊರಿಗೆ ಬಂದು ಆಕೆ ಜೀನ್ಸ್ ಧರಿಸುವುದಕ್ಕೆ ಆಕೆಯ ಚಿಕ್ಕಪ್ಪ ಹಾಗೂ ಅಜ್ಜ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬಾಲಕಿಯ  ಅಜ್ಜ ಮತ್ತು ಚಿಕ್ಕಪ್ಪ ಅನಾಗರಿಕರಾಗಿದ್ದು, ಆಧುನಿಕತೆಗೆ ಹೊಂದಿಕೊಳ್ಳದ ಸ್ವಭಾವ ಹೊಂದಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಬಾಲಕಿ ಏನೋ ಮಹಾಪಾಪ ಮಾಡುತ್ತಿದ್ದಾಳೆ ಎಂಬಂತೆ ವರ್ತಿಸಿದ್ದು, ಜೀನ್ಸ್ ಧರಿಸಬೇಡ ಎಂದು ತಗಾದೆ ತೆಗೆದಿದ್ದಾರೆನ್ನಲಾಗಿದೆ.

ಚಿಕ್ಕಪ್ಪ ಹಾಗೂ ಅಜ್ಜನ ಅನಾಗರಿಕ ಮಾತುಗಳಿಗೆ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಬಾಲಕಿ ತಮ್ಮ ಮಾತು ಕೇಳುತ್ತಿಲ್ಲ, ನಮಗೆ ಎದುರು ಮಾತನಾಡುತ್ತಿದ್ದಾಳೆ ಎಂಬ ಆಕ್ರೋಶದಿಂದ  ಬಾಲಕಿಯನ್ನು ಹತ್ಯೆ ಮಾಡಿ, ನೇಣು ಬಿಗಿದ ಸ್ಥಿತಿಯಲ್ಲಿ ಕಟ್ಟಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ನಾನು ಇಲ್ಲದ ವೇಳೆ ಚಿಕ್ಕಪ್ಪ ಹಾಗೂ ಅಜ್ಜ ನನ್ನ ಮಗಳನ್ನು ಹತ್ಯೆ ಮಾಡಿದ್ದಾರೆ. ಬಳಿಕ ಊರ ಹೊರಗಿನ ಸೇತುವೆ ಬಳಿಯಲ್ಲಿ ನೇತು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ತನ್ನ ಚಿಕ್ಕಪ್ಪ- ಅಜ್ಜನ ಅಜ್ಞಾನಕ್ಕೆ ಇನ್ನೂ ಬಾಳಿ ಬದುಕಬೇಕಿದ್ದ ಬಾಲಕಿಯೋರ್ವಳು ಬಲಿಯಾಗಿದ್ದಾಳೆ. ಇಡೀ ಪ್ರಪಂಚ ಆಧುನಿಕತೆಯತ್ತ ಹೋದರೆ, ಭಾರತದಲ್ಲಿ ಮಾತ್ರ ದಿನದಿಂದ ದಿನಕ್ಕೆ ಅಜ್ಞಾನದ ಆಚರಣೆಗಳು ಬಲಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು?

ಬಿಜೆಪಿಗೆ ರಾಜೀನಾಮೆ ಪರ್ವ ಆರಂಭವಾಗುತ್ತಾ? | 2ನೇ ಅಸ್ತ್ರ ಪ್ರಯೋಗಕ್ಕೆ ಸಜ್ಜು!

ಮನೆಗೆ ನುಗ್ಗಲು ಯತ್ನಿಸಿದ ಬೃಹತ್ ಹಾವನ್ನು ತಡೆದು ಮನೆಗೆ ಕಾವಲು ನಿಂತ ಬೆಕ್ಕು!

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ಇತ್ತೀಚಿನ ಸುದ್ದಿ