17 ಬಸ್ ಸುಟ್ಟು ಭಸ್ಮ: ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರ ನಗರದಲ್ಲಿ ಭಾರೀ ಅಗ್ನಿ ಅವಘಡ
30/10/2023
ಬೆಂಗಳೂರು: ಅಗ್ನಿ ಅವಘಡದಲ್ಲಿ 17 ಬಸ್ ಗಳು ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರ ನಗರದಲ್ಲಿ ನಡೆದಿದೆ.
ಬಸ್ ಗೆ ಹತ್ತಿಕೊಂಡ ಬೆಂಕಿ ಅಕ್ಕಪಕ್ಕದ ಗೋದಾಮುಗಳಿಗೂ ವ್ಯಾಪಿಸಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಶ್ರೀನಿವಾಸ್ ಎಂಬವರಿಗೆ ಸೇರಿದ ವರ್ಕ್ ಶಾಪ್ ನಲ್ಲಿ ಈ ಘಟನೆ ನಡೆದಿದ್ದು, ಅನ್ಯರಾಜ್ಯಗಳಿಗೆ ತೆರಳುವ ಸುಮಾರು 35ರಿಂದ 40ರಷ್ಟು ಹವಾನಿಯಂತ್ರಿತ ಐಷಾರಾಮಿ ಬಸ್ ಗಳು ಇಲ್ಲಿ ನಿಲುಗಡೆಯಾಗುತ್ತಿತ್ತು.
ಬಸ್ ವೊಂದರ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ವೆಲ್ಡಿಂಗ್ ನಡೆಸುತ್ತಿದ್ದ ವೇಳೆ ಅಗ್ನಿಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಬಸ್ ಗಳು ಸುಟ್ಟು ಹೋದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.