17 ದಿನಗಳಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ 778 ಮಂದಿ ಕೊರೊನಾಕ್ಕೆ ಬಲಿ!
![covid](https://www.mahanayaka.in/wp-content/uploads/2021/05/covid-1-1.jpg)
21/05/2021
ಬೆಂಗಳೂರು: ಕೇವಲ 17 ದಿನಗಳಲ್ಲಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 778 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ಇದೀಗ ಬಯಲಾಗಿದ್ದು, ಡೆತ್ ಅನಾಲಿಸಿಸ್ ಸಮಿತಿಯ ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಕೊರೊನಾ ಲಕ್ಷಣಗಳಿಲ್ಲದೇ ಇದ್ದವರು ಹಾಗೂ ಸಾಮಾನ್ಯ ಲಕ್ಷಣಗಳಿದ್ದವರು ಮನೆಯಲ್ಲಿಯೇ ಐಸೋಲೇಷನ್ ನಲ್ಲಿದ್ದು, ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡು ದಿಡೀರ್ ಸಾವನ್ನಪ್ಪಿದ್ದಾರೆ ಎಂದು ಸಮಿತಿ ವರದಿಯಿಂದ ತಿಳಿದು ಬಂದಿದೆ.
ಚಿಕಿತ್ಸೆ 95:5 ಆಧಾರದಲ್ಲಿ ನಡೆಯುತ್ತಿತ್ತು. ಶೇ.95 ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶೇ.5 ಜನ ಆಸ್ಪತ್ರೆ, ಸಿಸಿ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೇ.11 ಮಂದಿಗೆ ಚಿಕಿತ್ಸೆಯ ಆವಶ್ಯಕತೆ ಇದ್ದರೂ ಅವರು ಹೋಮ್ ಐಸೋಲೇಷನ್ ನಲ್ಲಿದ್ದರು, ಇದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಬಿಎಂಪಿಯ ನಿರ್ಲಕ್ಷ್ಯವೇ ನೇರ ಕಾರಣವಾಗಿದೆ ಎಂದು ಹೇಳಲಾಗಿದೆ.