ಆಹಾರ ಸಂಸ್ಕರಣಾ ಘಟಕದಿಂದ ಅಮೋನಿಯಾ ಅನಿಲ ಸೋರಿಕೆ: 17 ಮಂದಿ ಆಸ್ಪತ್ರೆಗೆ ದಾಖಲು
ಅಮೋನಿಯಾ ಅನಿಲ ಸೋರಿಕೆಯಾದ ನಂತರ ಪುಣೆ ಜಿಲ್ಲೆಯ ಯವತ್ ಪ್ರದೇಶದ ಆಹಾರ ಸಂಸ್ಕರಣಾ ಘಟಕದ ಹದಿನೇಳು ಮಂದಿ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯವತ್ ಬಳಿಯ ಭಾಂಡ್ಗಾಂವ್ ನಲ್ಲಿರುವ ಘಟಕವು ತಿನ್ನಲು ಸಿದ್ಧವಾದ ಆಹಾರವನ್ನು ತಯಾರಿಸುತ್ತದೆ ಮತ್ತು 18 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದ ಅಗತ್ಯವಿರುತ್ತದೆ, ಇದನ್ನು ಅಮೋನಿಯಾ ಬಳಸಿ ನಿರ್ವಹಿಸಲಾಗುತ್ತದೆ.
ಒಂದು ವಿಭಾಗದಲ್ಲಿ ಅಮೋನಿಯಾ ಸೋರಿಕೆಯಾಗಿದೆ. ಘಟನೆಯ ಸಮಯದಲ್ಲಿ 25 ಮಂದಿಯಲ್ಲಿ ಹೆಚ್ಚಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದರು” ಎಂದು ಯವತ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣ್ ದೇಶ್ ಮುಖ್ ಹೇಳಿದ್ದಾರೆ.
ಅನಿಲ ಸೋರಿಕೆಯಿಂದ ಹದಿನೇಳು ಕಾರ್ಮಿಕರು ಬಾಧಿತರಾಗಿದ್ದಾರೆ. ಅವರಲ್ಲಿ ಒಬ್ಬ ಮಹಿಳೆ ಸೋರಿಕೆಯ ಸ್ಥಳಕ್ಕೆ ಹತ್ತಿರದಲ್ಲಿರುವುದರಿಂದ ಇತರರಿಗಿಂತ ಹೆಚ್ಚು ಎಂದು ದೇಶ್ ಮುಖ್ ಹೇಳಿದರು.
ಅನಿಲ ಸೋರಿಕೆಯ ನಂತರ ಮುಖ್ಯ ನಿಯಂತ್ರಕವನ್ನು ಸ್ವಿಚ್ ಆಫ್ ಮಾಡಲಾಯಿತು. ಅಸ್ವಸ್ಥ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಹದಿನಾರು ಕಾರ್ಮಿಕರ ಆರೋಗ್ಯ ಸ್ಥಿರವಾಗಿದೆ. ಅನಿಲಕ್ಕೆ ನೇರವಾಗಿ ಒಡ್ಡಿಕೊಂಡ ಮಹಿಳೆ ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth