ಬಾಲಕಿಯ ಮೇಲೆ ತಂದೆ—ಚಿಕ್ಕಪ್ಪನಿಂದ ಅತ್ಯಾಚಾರ: ತಾತನಿಂದ ಲೈಂಗಿಕ ಕಿರುಕುಳ

stop rape
17/11/2022

ಪುಣೆ: 17 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ಹಾಗೂ ಚಿಕ್ಕಪ್ಪ ಅತ್ಯಾಚಾರ ನಡೆಸಿದ ಹೀನ ಕೃತ್ಯ ನಡೆದಿದ್ದು, ಘಟನೆ ಸಂಬಂಧ ಪುಣೆಯ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಾಳೆ.

ತಂದೆ, ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದು, ತಾತ ಕೂಡ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ  ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಲಕಿ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳದ ಕುರಿತು ಕಾಲೇಜಿನ ವಿಶಾಖ ಸಮಿತಿಗೆ ಬಾಲಕಿ ಇತ್ತೀಚೆಗೆ ಹೇಳಿಕೆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ದೂರಿನನ್ವಯ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿಯಲ್ಲಿ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

2016ರಿಂದ 2018ರವರೆಗೆ ಮನೆಯಲ್ಲಿದ್ದಾಗ ಬಾಲಕಿಯ ಚಿಕ್ಕಪ್ಪ ಅತ್ಯಾಚಾರ ನಡೆಸಿದ್ದ. ತಾತ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ತನ್ನ ಮೇಲೆ ಚಿಕ್ಕಪ್ಪ ಅತ್ಯಾಚಾರ ನಡೆಸುತ್ತಿದ್ದಾನೆ, ತಾತನೂ ಕಿರುಕುಳ ಕೊಡುತ್ತಿದ್ದಾನೆ ಎಂದು ತಂದೆಯ ಬಳಿ ಬಾಲಕಿ ಹೇಳಿದಾಗ, ಆಕೆಯನ್ನು ರಕ್ಷಿಸುವ ಬದಲು ಆತನೂ ತನ್ನ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version