ಜನವರಿ 17 ರಂದು  ಬೌದ್ಧ ಧರ್ಮ ದೀಕ್ಷಾ ಸಮಾರಂಭ | ಹೆತ್ತೂರ್ ನಾಗರಾಜ್ - Mahanayaka
2:23 PM Wednesday 4 - December 2024

ಜನವರಿ 17 ರಂದು  ಬೌದ್ಧ ಧರ್ಮ ದೀಕ್ಷಾ ಸಮಾರಂಭ | ಹೆತ್ತೂರ್ ನಾಗರಾಜ್

16/01/2021

ಹಾಸನ : ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ದಲ್ಲಿ ಜನವರಿ 17 ರಂದು ಹಾಸನ ಜಿಲ್ಲಾ ಮಟ್ಟದ ಬೌದ್ಧ ಧರ್ಮ ದೀಕ್ಷಾ ಸಮಾರಂಭವನ್ನು ಏರ್ಪ ಡಿಸಲಾಗಿದ್ದು , ಅಂದು ನೂರಕ್ಕೂ ಹೆಚ್ಚು ಜನರು ದೀಕ್ಷೆಯನ್ನು ಪಡೆಯಲಿದ್ದಾರೆ ಎಂದು ವಿಶ್ವ ಬುದ್ಧ ಧಮ್ಮ ಸಂಘದ ಜಿಲ್ಲಾ ಸಂಚಾಲಕ ಆರ್.ಪಿ.ಐ. ಸತೀಶ್ ಮತ್ತು ದಲಿತ ಮುಖಂಡರಾದ ಹೆತ್ತೂರ್ ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು , ವಿಶ್ವ ಬುದ್ಧ ಧಮ್ಮ ಸಂಘದಿಂದ 2021 ರ ಅ .14 ರಂದು 10 ಲಕ್ಷ ಜನರು ಬೆಂಗಳೂರಲ್ಲಿ ಮಹಾ ಧಮ್ಮ ದೀಕ್ಷೆ ಪಡೆಯಲಿದ್ದಾರೆ .

ಇದಕ್ಕೂ ಮೊದಲು ಹಾಸನದ ಕಸಾಪ ಭವನದಲ್ಲಿ ಇದೆ ಭಾನುವಾರದಂದು ಬೆಳಿಗ್ಗೆ 11 : 30 ಕ್ಕೆ ಹಾಸನ ಜಿಲ್ಲಾ ಮಟ್ಟದ ಧಮ್ಮ ದೀಕ್ಷೆ ಸಮಾರಂಭ ಜರುಗಲಿದೆ ಎಂದರು. ಮೊದಲು ಪೂಜ್ಯ ಭಿಕ್ಕು ಸಂಘದ ಮಾರ್ಗದರ್ಶನದಲ್ಲಿ ಧಮ್ಮ ದೀಕ್ಷೆಯನ್ನು ಬೆಂಗಳೂರಿನ ನಾಗಸೇನಾ ಬುದ್ಧವಿಹಾರ ಕೇಂದ್ರದ ಭಿಕ್ಕುಣಿ ಬುದ್ಧಮ್ಮ ಮತ್ತು ಧಮ್ಮಚಾರಿ ಡಾ . ಹೆಚ್.ಆರ್, ಸುರೇಂದ್ರ ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಸಮಾರಂಭ ನಡೆಯಲಿದ್ದು , ಉದ್ಘಾಟನೆಯನ್ನು ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ವಿ.ಬಿ.ಡಿ.ಎಸ್ , ಪ್ರಧಾನ ಸಂಚಾಲಕ ಎಂ . ವೆಂಕಟಸ್ವಾಮಿ , ಸಕಲೇಶಪು ರದ ಶಾಸಕ ಹೆಚ್.ಕೆ. ಕುಮಾರ ಸ್ವಾಮಿ , ಮಾಜಿ ಮಂತ್ರಿ ಎ . ಮಂಜು, ಬಿ.ಶಿವರಾಮ್ , ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ವೇತಾದೇವರಾಜು . ಎಂಸಿ ಕಾಲೇಜು ಉಪನ್ಯಾಸಕ ಅತ್ನಿ ಕೃಷ್ಣ , ಬೌದ್ಧ ಮಹಾಸಭಾದ ಅಧ್ಯಕ್ಷ ಇಂದಿರಾ ಬಹದ್ದೂರ್ ಮಾನವ ಬಂಧುತ್ವ ವೇದಿಕೆಯ ಜಿ.ಓ. ಮಹಾಂತಪ್ಪ , ಅಮೋಘ ವಾಣಿ ದಿನಪತ್ರಿಕೆ ಸಂಪಾದಕರಾದ ರಂಗಸ್ವಾಮಿ ಇತರರು ಪಾಲ್ಗೊಳ್ಳುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಬುದ್ಧ ಧಮ್ಮ ಸಂಘದ ಮುಖಂಡರಾದ ಸ್ಟೀವನ್ ಪ್ರಕಾಶ್ ಜಿಲ್ಲಾ ಕಾರ್ಯದರ್ಶಿ ದೇವರಾಜ ಇತರರು ಉಪಸ್ಥಿತರಿದರು .

ಕೃಪೆ: Jagrutinews

ಇತ್ತೀಚಿನ ಸುದ್ದಿ