ದೇವಸಹಾಯಂ ಪಿಳ್ಳೈ ಪೋಪ್ ಫ್ರಾನ್ಸಿಸ್  "ಸಂತ" ಎಂದು ಘೋಷಣೆ - Mahanayaka
12:18 PM Wednesday 5 - February 2025

ದೇವಸಹಾಯಂ ಪಿಳ್ಳೈ ಪೋಪ್ ಫ್ರಾನ್ಸಿಸ್  “ಸಂತ” ಎಂದು ಘೋಷಣೆ

devasahayam
17/05/2022

ಚೆನ್ನೈ: 18ನೇ ಶತಮಾನದಲ್ಲಿ ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದೇವಸಹಾಯಂ ಪಿಲ್ಲ ಅವರನ್ನು ಸೋಮವಾರ ಮಧ್ಯಾಹ್ನ ವ್ಯಾಟಿಕನ್‌ ನ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ನಡೆದ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್  “ಸಂತ”ಎಂದು ಘೋಷಿಸಿದರು.

ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ವ್ಯಾಟಿಕನ್ ನಲ್ಲಿ ಸಮಾರಂಭ ನಡೆಯಿತು.  ದೇವಸಹಾಯ ಪಿಳ್ಳೆ ಹತ್ಯೆಯಾದ ಕಟಾಡಿಮಲಯಲ್ಲಿ ಮತ್ತು ಅವರ ಹೆಸರಿನ ನೆಯ್ಯಟ್ಟಿಂಕರ ಚರ್ಚ್‌ನಲ್ಲಿ ಇಂದು ವಿಶೇಷ ಪ್ರಾರ್ಥನೆ ಮತ್ತು ಆಚರಣೆಗಳು ನಡೆಯಲಿವೆ.

ಲಾಝರಸ್‌ ಎಂದೂ ಕರೆಯಲ್ಪಡುವ ದೇವಸಹಾಯಂ, “ಹೆಚ್ಚುತ್ತಿರುವ ಕಷ್ಟಗಳನ್ನು ಸಹಿಸಿಕೊಳ್ಳುವುದು” ಎಂದು ಕರೆಯಲ್ಪಡುವ ಸಂತತ್ವವನ್ನು ಪಡೆದ ಮೊದಲ ಭಾರತೀಯ ಸಾಮಾನ್ಯವ್ಯಕ್ತಿಯಾಗಿದ್ದಾರೆ ದೇವಸಹಾಯಂ ಎಂದು ndtv.com ವರದಿ ಮಾಡಿದೆ.

ಇಂದಿನ ಕನ್ಯಾಕುಮಾರಿಯ ಸಮೀಪ ಹಿಂದೂ ಮೇಲ್ಜಾತಿ ಕುಟುಂಬವೊಂದರಲ್ಲಿ ಜನಿಸಿದ್ದ ನೀಲಕಂಠನ್‌ ಪಿಳ್ಳೈ ಬಳಿಕ ತಿರುವಾಂಕೂರ್‌ ಅರಮನೆಯಲ್ಲಿ ಕೆಲಸ ಮಾಡಿದರು. 1745ರಲ್ಲಿ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡರು ಮತ್ತು ದೇವಸಹಾಯಂ ಹಾಗೂ ಲಾಝರಸ್‌ ಎಂಬ ಹೆಸರು ಪಡೆದರು. ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕಿಳಿದ ಅವರು ಆ ಕಾರಣದಿಂದಲೇ ಗುಂಡಿಕ್ಕಿ ಸಾಯಿಸಿದರು.2012ರಲ್ಲಿ ವ್ಯಾಟಿಕನ್‌ ಹುತಾತ್ಮ ಎಂದು ಗುರುತಿಸಿತು.

ಸಂತ ಪದವಿ ಪ್ರದಾನ ಸಮಾರಂಭದ ಅಂಗವಾಗಿ ಇಂದು ತಮಿಳುನಾಡಿನ ಕೊಟ್ಟಾರ್ ಮತ್ತು ಕುಜಿತ್ತೂರ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.  ನೆಯ್ಯಾಟ್ಟಿಂಕರ ಧರ್ಮಪ್ರಾಂತ್ಯದ ಪಾರಶಾಲ ಫೋರೋನ ಚವಲ್ಲೂರು ಪೊಟ್ಟಾದಲ್ಲಿರುವ ಪರಮಪೂಜ್ಯರ ಹೆಸರಿನಲ್ಲಿ ಮೊದಲ ಚರ್ಚ್‌ನಲ್ಲಿಯೂ ಆಚರಣೆಗಳು ನಡೆಯುತಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು ಅಕ್ಕನಿಂದಲೇ ತಮ್ಮನ ಹತ್ಯೆ!

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎತ್ತಂಗಡಿ

ಶ್ರೀಗುರುದತ್ತಾತ್ರೇಯ ಪೀಠದ ಹೋಮ ನಡೆಯುವ ಸ್ಥಳದಲ್ಲಿ ನಾನ್ ವೆಜ್ ಊಟ, ಭಕ್ತರಿಂದ ಆಕ್ರೋಶ

ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ!

ಇತ್ತೀಚಿನ ಸುದ್ದಿ