70 ವರ್ಷದ ವೃದ್ಧನನ್ನು ವಿವಾಹವಾದ 19 ವರ್ಷದ ಯುವತಿ: ಒಂದು ವಿಚಿತ್ರ ಪ್ರೇಮ ಕಥೆ!
70 ವರ್ಷ ವಯಸ್ಸು ಅಂದ್ರೆ, ಬಹುತೇಕ ಜನರು ಸಾವನ್ನು ಎದುರು ನೋಡುವ ವಯಸ್ಸು ಅಂತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ 70ನೇ ವಯಸ್ಸಿನಲ್ಲಿ 19 ವರ್ಷದ ಯುವತಿಯನ್ನು ಪ್ರೀತಿಸಿ ವಿವಾಹವಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಶುಮೈಲಾ(19) ಎಂಬಾಕೆ ಲಿಯಾಖತ್ ಅಲಿ(70) ಎಂಬವರನ್ನು ವಿವಾಹವಾಗಿದ್ದು, ಪೋಷಕರ ವಿರೋಧದ ನಡುವೆಯೂ ತನ್ನ ತಂದೆಯ ವಯಸ್ಸಿಗೂ ಹಿರಿಯನಾದ ವ್ಯಕ್ತಿಯನ್ನು ಶುಮೈಲಾ ವಿವಾಹವಾಗಿದ್ದಾರೆ.
ಇವರ ಪ್ರೇಮ ಕಥೆ ಹೀಗಿದೆ;
ಬೆಳಗ್ಗಿನ ಜಾವ ಲಿಯಾಖತ್ ಹಾಡು ಹಾಡುತ್ತಾ ವಾಕಿಂಗ್ ಮಾಡುತ್ತಿದ್ದರು. ಆತನ ಗಾಯನ ಕೇಳಿದ ಶುಮೈಲಾಗೆ ಲಿಯಾಖತ್ ಬಹಳ ಇಷ್ಟವಾಗಿದ್ದಾರೆ. ಇದಾದ ಬಳಿಕ ಇವರಿಬ್ಬರು ಪ್ರೀತಿಗೆ ಬಿದ್ದರು ಎಂದು ಎನ್ನಲಾಗಿದೆ.
ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅದು ಹೇಗೋ ಪೋಷಕರನ್ನು ಒಪ್ಪಿಸಿ ಇಬ್ಬರು ವಿವಾಹವಾಗಿದ್ದಾರೆ. ಇನ್ನೂ ವಯಸ್ಸಿನಲ್ಲಿ ಅಜಗಜಾಂತರವಿರುವ ಈ ಜೋಡಿಗೆ ಇದೀಗ ಅಸಭ್ಯ ಕಾಮೆಂಟ್ ಗಳನ್ನು ಕೇಳಿ ಸಾಕಾಗಿ ಹೋಗಿದೆಯಂತೆ. ಈ ಬಗ್ಗೆ ಶುಮೈಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಮದುವೆ ಅನ್ನೋದು ವೈಯಕ್ತಿಕ ನಿರ್ಧಾರವಾಗಿದೆ. ಆ ನಿರ್ಧಾರವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅವರವರು ಇಷ್ಟ ಪಟ್ಟಂತೆ ಜೀವಿಸಲು ಎಲ್ಲರೂ ಇಷ್ಟ ಪಡುತ್ತಾರೆ. ಹಾಗಾಗಿ ನನ್ನ ವೈವಾಹಿಕ ನಿರ್ಧಾರದ ಬಗ್ಗೆ ಯಾರೂ ಅಸಭ್ಯ ಕಾಮೆಂಟ್ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka