ಅಪ್ರಾಪ್ತ ಬಾಲಕಿಯರ ಮುಂದೆ ನಗ್ನತೆ ಪ್ರದರ್ಶನ: ನಟ ಶ್ರೀಜಿತ್ ರವಿ ಬಂಧನ

ತ್ರಿಶೂರ್: ಅಪ್ರಾಪ್ತ ಬಾಲಕಿಯರ ಮುಂದೆ ನಗ್ನತೆ ಪ್ರದರ್ಶಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು ಸಿಕ್ಕಿಲ್ಲ. ತ್ರಿಶೂರ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆತನನ್ನು 14 ದಿನಗಳ ಕಾಲ ರಿಮಾಂಡ್ ನೀಡಿದೆ.
ಇಂದು ಬೆಳಗ್ಗೆ ತ್ರಿಶೂರ್ ಪಶ್ಚಿಮ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಪೋಕ್ಸೊ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀಜಿತ್ ರವಿ ಅವರ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯಲ್ಲಿ ವಾದ ಮಂಡಿಸಿ, ಅವರಿಗೆ ಕಾಯಿಲೆಯಿದ್ದು, ಔಷಧಿ ಸೇವಿಸದ ಕಾರಣ ಸಮಸ್ಯೆಯಾಗಿದೆ ಎಂದಿದ್ದಾರೆ.
ಆದರೆ ಆರೋಪಿಗಳು ಈ ಹಿಂದೆಯೂ ಇದೇ ರೀತಿಯ ಅಪರಾಧಗಳನ್ನು ಮಾಡಿದ್ದು, ಜಾಮೀನು ನೀಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಇದನ್ನು ಒಪ್ಪಿಕೊಂಡ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯರು ನಡೆದುಕೊಂಡು ಬರುತ್ತಿದ್ದ ವೇಳೆ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ರವಿ, ಕಾರಿನಿಂದ ಇಳಿದು ನಗ್ನತೆ ಪ್ರದರ್ಶಿಸಿದ್ದು, ಈ ಬಗ್ಗೆ ಬಾಲಕಿಯರು ತಮ್ಮ ಪೋಷಕರಿಂದ ಪ್ರಕರಣ ದಾಖಲಿಸಿದ್ದರು. ವಾಹನದ ಮಾಹಿತಿ ಬೆನ್ನು ಹತ್ತಿದ ಪೊಲೀಸರು ಶ್ರೀಜಿತ್ ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಶ್ರೀಜಿತ್, ತನಗೆ ಮಾನಸಿಕ ಅಸ್ವಸ್ಥತೆ ಇದೆ ಅದಕ್ಕೆ ಚಿಕಿತ್ಸೆ ಪಡೆಯುತ್ತಿರೋದಾಗಿ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka