19 ತಿಂಗಳ ರಜೆಯ ಬಳಿಕ 1ರಿಂದ 5ನೇ ತರಗತಿವರೆಗೆ ಶಾಲಾರಂಭದ ಸುಳಿವು!
ಬೆಂಗಳೂರು: ರಾಜ್ಯದಲ್ಲಿ 1ರಿಂದ 5ನೇ ತರಗತಿಯವರೆಗೆ ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಪ್ರಶ್ನೆಗಳನ್ನು ಕಳೆದ 19 ತಿಂಗಳುಗಳಿಂದ ಪೋಷಕರು ಕೇಳುತ್ತಲೇ ಇದ್ದಾರೆ. ಇದೀಗ ಅಂತಿಮವಾಗಿ ಅವರ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆಗಳು ಇದೀಗ ಕಂಡು ಬಂದಿದೆ.
ಸದ್ಯದ ಮಾಹಿತಿಗಳ ಪ್ರಕಾರ ದಸರ ರಜೆಯ ಬಳಿಕ 1ರಿಂದ 5ನೇ ತರಗತಿಯವರೆಗಿನ ಮಕ್ಕಳಿಗೆ ಶಾಲೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈಗಾಗಲೇ ಸೆಪ್ಟಂಬರ್ ತಿಂಗಳು ಮುಗಿಯುತ್ತಿದೆ. ಅಕ್ಟೋಬರ್ 10ರಿಂದ ಮಧ್ಯಂತರ ಅಥವಾ ದಸರಾ ರಜೆ ಆರಂಭಗೊಳ್ಳಲಿದೆ. ಈ ರಜೆ ಅಕ್ಟೋಬರ್ 20ಕ್ಕೆ ಮುಗಿಯಲಿದೆ. ಸರ್ಕಾರ ಚಿಂತಿಸಿರುವ ಪ್ರಕಾರವೇ ಎಲ್ಲವೂ ನಡೆದರೆ, ಅಕ್ಟೋವರ್ 21ರಿಂದ 1ನೇ ತರಗತಿಯಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಶಾಲೆ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ ನಿಜ. ಆದರೆ, ಕೊವಿಡ್ ಮೂರನೆ ಅಲೆಯ ಲಕ್ಷಣಗಳನ್ನು ನೋಡಿಕೊಂಡು ಬಳಿಕ ಶಾಲೆ ಆರಂಭ ಮಾಡಬೇಕು ಎಂದು ಸರ್ಕಾರ ಚಿಂತಿಸಿದೆ. ಹಾಗಾಗಿ ಕೊವಿಡ್ ಮೂರನೇ ಅಲೆಯ ಯಾವ ಲಕ್ಷಣಗಳೂ ಕಂಡು ಬಾರದೇ ಇದ್ದಲ್ಲಿ ಸರ್ಕಾರ ಅಕ್ಟೋಬರ್ 21ರಿಂದ ಶಾಲೆ ಆರಂಭಕ್ಕೆ ಮುಂದಾಗಬಹುದು ಎಂದು ಸದ್ಯ ನಿರೀಕ್ಷಿಸಲಾಗಿದೆ.
ಈಗಾಗಲೇ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ರಾಜ್ಯಗಳಲ್ಲಿ 1ರಿಂದ 5ನೇ ತರಗತಿವರೆಗಿನ ಶಾಲೆಗಳು ಕೂಡ ತೆರೆದಿವೆ. ಇವುಗಳನ್ನು ಲೆಕ್ಕಚಾರಕ್ಕೆ ತೆಗೆದುಕೊಂಡರೆ, ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ವ್ಯಾಕ್ಸಿನ್ ಕೂಡ ತೆಗೆದುಕೊಂಡಿದ್ದಾರೆ. ಹಾಗಾಗಿ ಮೂರನೇ ಅಲೆಯ ಬಗ್ಗೆ ಹೆಚ್ಚಿನ ಭೀತಿ ಇಲ್ಲ ಎನ್ನುವ ಸಮಾಧಾನ ಒಂದೆಡೆ ಇದೆ. ಇನ್ನೊಂದೆಡೆ ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರಕ್ಕೆ ಶಾಲೆ ಆರಂಭ ಮಾಡುವುದು ಒಂದು ತಲೆ ನೋವಿನ ಸಂಗತಿಯಾಗಿದೆ. ಅಂತಿಮವಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವೆ ಜೊಲ್ಲೆ ವಿರುದ್ಧ ತಿರುಗಿ ಬಿದ್ದ ಗೋಮಾತೆ | ಸಚಿವರಿಗೆ ತಿವಿಯಲು ಯತ್ನ
ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು?
ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ
ರಾಜ್ಯದಲ್ಲಿ ಆಪರೇಷನ್ ಹಸ್ತ ಆರಂಭ? | ಬಿಜೆಪಿಯ ಮೊದಲ ವಿಕೆಟ್ ಪತನ?
ಮಂಗಳೂರು: ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರಿಗೆ ದಾಳಿ: ಐವರು ಕಿಡಿಗೇಡಿಗಳ ಬಂಧನ
ಬೆಂಗಳೂರಿನಲ್ಲಿ ಕುಸಿದು ಬಿತ್ತು ಮತ್ತೊಂದು 3 ಅಂತಸ್ತಿನ ಹಳೆಯ ಕಟ್ಟಡ!
ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಅಮಾನವೀಯ ಘಟನೆ: ಪತ್ನಿಗೆ ನಿದ್ರೆ ಮಾತ್ರೆ ನೀಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ