ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ!
ಸಹರಾನ್ ಪುರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಇಂದು ನಡೆದಿದೆ.
ಆಜಾದ್ ಅವರ ಕಾರಿನ ಮೇಲೆ ಎರಡು ಗುಂಡುಗಳು ಬಿದ್ದಿದ್ದು, ಈ ಗುಂಡುಗಳ ಪೈಕಿ ಒಂದು ಗುಂಡು ಕಾರಿನ ಸೀಟ್ ಗೆ ತಗುಲಿ ಅವರ ಸೊಂಟವನ್ನು ತಾಗಿಕೊಂಡು ಹೋಗಿದ್ದರೆ, ಮತ್ತೊಂದು ಗುಂಡು ಕಾರಿನ ಹಿಂಬಾಗಿಲಿಗೆ ತಗುಲಿ ಸ್ವಲ್ಪವೇ ಆಜಾದ್ ಅವರ ಸ್ವಲ್ವವೇ ಅಂತರದಲ್ಲಿ ಮಿಸ್ ಆಗಿದೆ.
ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಗೆ ಕಾರಿನಲ್ಲಿ ಬಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಸದ್ಯ ಚಂದ್ರಶೇಖರ್ ಆಜಾದ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಿಎಚ್ ಸಿಗೆ ಕರೆದೊಯ್ಯಲಾಗಿದೆ. ಅವರು ಆರೋಗ್ಯವಾಗಿದ್ದಾರೆ.
ಭೀಮ್ ಆರ್ಮಿ ಮುಖ್ಯಸ್ಥರು ತಮ್ಮ ಟೊಯೋಟಾ ಫಾರ್ಚೂನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸದಸ್ಯ ಆಜಾದ್ ಹಾಗೂ ಅವರ ಹಾನಿಗೊಳಗಾಗಿರುವ ಕಾರಿನ ಫೋಟೋವನ್ನು ಭೀಮ್ ಆರ್ಮಿ ಹಂಚಿಕೊಂಡಿದ್ದು, ಬಹುಜನ್ ಮಿಷನ್ ಆಂದೋಲವನ್ನು ನಿಲ್ಲಿಸುವ ಹೇಡಿತನದ ಕೃತ್ಯ ಇದಾಗಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw