ಹತ್ರಸ್ ದುರಂತ: ಬಾಬಾ ಧೂಳನ್ನು ಸಂಗ್ರಹಿಸೋ ವೇಳೆ ಕಾಲ್ತುಳಿತ; ಭಯಾನಕ ಮಾಹಿತಿ ಬಹಿರಂಗ - Mahanayaka

ಹತ್ರಸ್ ದುರಂತ: ಬಾಬಾ ಧೂಳನ್ನು ಸಂಗ್ರಹಿಸೋ ವೇಳೆ ಕಾಲ್ತುಳಿತ; ಭಯಾನಕ ಮಾಹಿತಿ ಬಹಿರಂಗ

03/07/2024

120ಕ್ಕಿಂತಲೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಹತ್ರಸ್ ನ ದುರಂತದ ಕುರಿತಂತೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಂಡಿವೆ. ಸ್ವಘೋಷಿತ ದೇವಮಾನವ ಬೋಲೇ ಬಾಬಾ ರ ಕಾಲಿನಡಿಯ ಧೂಳನ್ನು ಸಂಗ್ರಹಿಸಲು ಜನರು ಮುಗಿಬಿದ್ದ ಕಾರಣ ಈ ಕಾಲ್ತುಳಿತ ಸಂಭವಿಸಿದೆ ಎಂದು ಗೊತ್ತಾಗಿದೆ. ಅವರು ಕಾರನ್ನೇರಿ ಹೊರಟುಹೋದ ಕೂಡಲೇ ಭಾರಿ ಸಂಖ್ಯೆಯಲ್ಲಿದ್ದ ಭಕ್ತರು ಅವರ ಕಾಲಡಿಯ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಕಾರಣ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ.


Provided by

ಈ ಬೃಹತ್ ಕಾರ್ಯಕ್ರಮದ ಭದ್ರತೆಗಾಗಿ ಕೇವಲ 40 ಮಂದಿ ಪೊಲೀಸರು ಮಾತ್ರ ಕರ್ತವ್ಯದಲ್ಲಿದ್ದರು ಎಂದು ವರದಿಯಾಗಿದೆ. ಈಗಾಗಲೇ ಎಫ್ ಐ ಆರ್ ದಾಖಲಿಸಲಾಗಿದ್ದು ಬೋಲೇ ಬಾಬಾ ಅವರ ಸಹಾಯಕ, ಕಾರ್ಯಕ್ರಮದ ಮುಖ್ಯ ಸಂಘಟಕ ಪ್ರಕಾಶ್ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ ಸ್ವ ಘೋಷಿತ ದೇವಮಾನವ ಬೋಲೆ ಬಾಬಾ ಅವರ ಹೆಸರು ಎಫ್ ಐ ಆರ್ ನಲ್ಲಿ ಇಲ್ಲ. ಆರೋಪಿಗಳ ವಿರುದ್ಧ ನರಹತ್ಯೆಗೆ ಸಂಬಂಧಿಸಿದ ಮತ್ತು ಹತ್ಯೆಗೆ ಸಮನಾದ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಬೋಲೇ ಬಾಬಾ ಅವರು ನಾಪತ್ತೆಯಾಗಿದ್ದಾರೆ ಎಂದು ಕೂಡ ವರದಿ ಇದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ