ಎರಡು ದಿನಗಳಲ್ಲಿ 16 ಮಂದಿಯ ನಿಗೂಢ ಸಾವು | ಬೆಚ್ಚಿಬಿದ್ದ ಗ್ರಾಮಸ್ಥರು
ಬೆತಿಯಾ: ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಕನಿಷ್ಠ 16 ಮಂದಿ ನಿಗೂಢವಾಗಿ ಮೃತಪಟ್ಟಿದ್ದು, ಕಳ್ಳಭಟ್ಟಿ ಸೇವನೆಯಿಂದ ಈ ದುರಂತ ನಡೆದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಚಂಪಾರನ್ ಜಿಲ್ಲಾಡಳಿತವು ನೀಡಿದ ಮಾಹಿತಿಯ ಪ್ರಕಾರ, ಸಾವಿಗೆ ಮುಂಚಿತವಾಗಿ ಮದ್ಯ ಸೇವಿಸಿರುವುದನ್ನು ಮೃತಪಟ್ಟಿರುವ ನಾಲ್ವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
ಇವರೆಲ್ಲರೂ ದುರ್ವಾ ಗ್ರಾಮದ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ಹಾಗೂ ಶುಕ್ರವಾರದಂದು ತಲಾ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಕಳ್ಳಭಟ್ಟಿ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ 36 ವರ್ಷದ ಮುಮ್ತಾಜ್ ಮಿಯಾನ್ ಸಂಬಂಧಿಕರ ದೂರಿನ ಅನ್ವಯ ಶಂಕಿತ ಆರೋಪಿ ಸುಮಿತ್ (22) ಸೇರಿದಂತೆ ಐವರನ್ನು ಬಂಧಿಸಲಾಗಿದೆ.
2016ರಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವು ಮದ್ಯ ಮಾರಾಟ ಹಾಗೂ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನುಹೇರಿತ್ತು.
ಇನ್ನಷ್ಟು ಸುದ್ದಿಗಳು:
ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ? ಕೊಲೆಯೋ?
ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ?
ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!