2 ಗಂಟೆಗಳಲ್ಲಿ 15 ಮಂದಿಗೆ ಕಚ್ಚಿದ ಹುಚ್ಚುನಾಯಿ | ಬೀದಿ ನಾಯಿಗಳ ಕಾಟದಿಂದ ರೋಸಿ ಹೋದ ಜನರು - Mahanayaka
1:00 AM Wednesday 11 - December 2024

2 ಗಂಟೆಗಳಲ್ಲಿ 15 ಮಂದಿಗೆ ಕಚ್ಚಿದ ಹುಚ್ಚುನಾಯಿ | ಬೀದಿ ನಾಯಿಗಳ ಕಾಟದಿಂದ ರೋಸಿ ಹೋದ ಜನರು

dog
18/07/2021

ಬೆಳಗಾವಿ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನಾಯಿಗಳ ಕಾಟವೂ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಹುಚ್ಚುನಾಯಿ 2 ಗಂಟೆಗಳ ಅಂತರದಲ್ಲಿ 15ಕ್ಕೂ ಅಧಿಕ ಮಂದಿಗೆ ಕಚ್ಚಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಹುಚ್ಚುನಾಯಿ ನಿನ್ನೆ ಒಂದೇ ದಿನ 15ಕ್ಕೂ ಅಧಿಕ ಮಂದಿಗೆ ಕಚ್ಚಿದ್ದು, ಯರಝರವಿ, ಮಳಗಲಿ, ಹೊಸೂರು ಗ್ರಾಮಗಳು ಸೇರಿದಂತೆ ಮೂರು ಗ್ರಾಮಗಳ ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ.

ಮಲ್ಲವ್ವ ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ದಪ್ಪ, ಸವಿತಾ ಸೇರಿದಂತೆ 15ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಚ್ಚಿದ್ದು, ಇವರನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬೀದಿ ನಾಯಿಗಳ ಹಾವಳಿ ಪ್ರತೀ ವರ್ಷ ಆರಂಭವಾಗುತ್ತಿದೆ. ಇದರ ಬಗ್ಗೆ ಜಿಲ್ಲಾಡಳಿಗಳು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಳೆದ ವರ್ಷವೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಯಿ ಕಡಿತದಿಂದ ಅನಾಹುತಗಳು ಸಂಭವಿಸಿವೆ. ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲದಿರುವುದರಿಂದ ಪ್ರತೀ ವರ್ಷವೂ ಪುಟ್ಟ ಮಕ್ಕಳು, ವಯೋವೃದ್ಧರು ಸೇರಿದಂತೆ ನಾಗರಿಕರು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುತ್ತಿದ್ದಾರೆ. ಪುಟಾಣಿಗಳು ಬಲಿಯಾಗುತ್ತಿದ್ದಾರೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು. ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು, ಬೀದಿ ನಾಯಿಯನ್ನು ಕೊಂದರೆ, ಪ್ರಾಣಿ ಹಿಂಸೆಯ ಹೆಸರಿನಲ್ಲಿ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ನಾಯಿಯಿಂದ ಕಚ್ಚಿಸಿಕೊಂಡು ತಮ್ಮದಲ್ಲದ ತಪ್ಪಿಗೆ ಇಂಜೆಕ್ಷನ್ ಪಡೆದುಕೊಳ್ಳಲು ಆಸ್ಪತ್ರೆಗೆ ಸುತ್ತಾಡಿ, ಸುಮ್ಮನಾಗಿ ಬಿಡುತ್ತಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೀದಿ ನಾಯಿಗಳ ದಾಳಿಯಿಂದ ಯಾರಾದರೂ ಕಡಿತಕ್ಕೊಳಗಾದರೆ, ಸಂತ್ರಸ್ತರಿಗೆ ಜಿಲ್ಲಾಡಳಿತ 5 ಲಕ್ಷ ಪರಿಹಾರವನ್ನು ನೀಡಬೇಕು ಎನ್ನುವ ಕಾನೂನನ್ನು ತರಬೇಕು. ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಯಾಕೆ ತೊಂದರೆಗೀಡಾಗಬೇಕು? ಎನ್ನುವ ಪ್ರಶ್ನೆಗಳು ಸದ್ಯ ಕೇಳಿ ಬಂದಿವೆ.

ಇನ್ನಷ್ಟು ಸುದ್ದಿಗಳು:

ದುಬೈನಿಂದ ಬಂದಿದ್ದ ಮಹಿಳೆ ಅಪಾರ್ಟ್ ನಲ್ಲಿ ಬರ್ಬರವಾಗಿ ಹತ್ಯೆ | ಬ್ಯಾಂಕ್ ನಿಂದ ಬಂದ ಮೇಲೆ ಪ್ಲಾಟ್ ಗೆ ನುಗ್ಗಿದ್ದು ಯಾರು?

ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ

ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ | ನಾಲಿಗೆ ಹರಿಯಬಿಟ್ಟ ನಾರಾಯಣಾಚಾರ್ಯ!

ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಮೇಲೊಬ್ಬ ಮಾಯಾವಿ’ ಚಿತ್ರ ತಂಡ

ಇನ್ನೊಬ್ಬರ ಬಗ್ಗೆ ಮಾತಾಡಬೇಕಾದ್ರೆ ಯೋಚಿಸಿ ಮಾತನಾಡಿ  | ದರ್ಶನ್ ಗೆ ನಟ ಪ್ರೇಮ್ ತಿರುಗೇಟು

ಇತ್ತೀಚಿನ ಸುದ್ದಿ