2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?
ವಿಜಯಪುರ: ಕೊವಿಡ್ 19 ಸಾಂಕ್ರಾಮಿಕ ರೋಗಕ್ಕೆ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು, ಮೂರನೇ ಅಲೆ ಭೀತಿಯ ನಡುವೆಯೇ ಹೆಣ್ಣು ಮಗು ಕೊವಿಡ್ ಗೆ ಬಲಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವಿಜಯಪುರ ಬಡಾವಣೆಯ 2 ವರ್ಷ ವಯಸ್ಸಿನ ಮಗು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ.20ರಂದು ಮಗುವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ಆರ್ ಟಿಪಿಸಿಆರ್ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದರೂ ಸಹ, ಮಗುವಿಗೆ ಜ್ವರ, ನಿಶ್ಯಕ್ತಿಯಂತಹ ಕೊರೊನಾ ಲಕ್ಷಣಗಳು ಗೋಚರಿಸಿದ್ದರಿಂದ ಮಗು ಕೊವಿಡ್ ನಿಂದ ಮೃತಪಟ್ಟಿದೆ ಎಂದು ಪರಿಗಣಿಸಲಾಗಿದೆ. ವೈದ್ಯರ ತಂಡ ಕೂಡ ಮಗು ಕೊವಿಡ್ ನಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಮೂರನೇ ಅಲೆ ಅಲ್ಲ
ಎರಡು ವರ್ಷದ ಮಗು ಕೊವಿಡ್ ನಿಂದ ಮೃತಪಟ್ಟ ಬೆನ್ನಲ್ಲೇ ಇದು ಮೂರನೇ ಅಲೆಯ ಮುನ್ಸೂಚನೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿತ್ತು. ಈ ಸಂಬಂಧ ವಿಜಯಪುರ ಡಿಸಿ ಪಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ಇದು ಮೂರನೇ ಅಲೆಯ ಮುನ್ಸೂಚನೆ ಅಲ್ಲ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಕೊರೊನಾ ಲಕ್ಷಣಗಳು ಕಂಡು ಬಂದರೆ ಅಂತಹ ಸಾವನ್ನು ಕೊವಿಡ್ ಸಾವು ಎಂದು ಪರಿಗಣಿಸಬೇಕು ಎಂಬ ಕಾರಣಕ್ಕಾಗಿ ಇದು ಕೊರೊನಾದಿಂದಾಗಿರುವ ಸಾವು ಎಂದು ಪರಿಗಣಿಸಲಾಗಿದೆ. ವೈದ್ಯರ ವರದಿಯಲ್ಲೂ ಇದು ಕೊರೊನಾದಿಂದ ಸಂಭವಿಸಿದ ಸಾವು ಎಂದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಇನ್ನಷ್ಟು ಸುದ್ದಿಗಳು…
ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ
ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ
ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ
ಜೆಸಿಬಿ ಅಡಿಗೆ ಸಿಲುಕಿ ಪೌರ ಕಾರ್ಮಿಕ ಸಹಿತ ಇಬ್ಬರು ಸಾವು!
ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಜಲಸಮಾಧಿ!
ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!
ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗುತ್ತಿದೆ | ಅಸಾದುದ್ದೀನ್ ಓವೈಸಿ ಆಕ್ರೋಶ