ಯುವತಿ ಜೊತೆ 20 ದಿನಗಳ ಕಾಲ ದೈಹಿಕ ಸಂಪರ್ಕ ನಡೆಸಿ ವಂಚನೆ: ಆರೋಪಿಯ ಬಂಧನ - Mahanayaka

ಯುವತಿ ಜೊತೆ 20 ದಿನಗಳ ಕಾಲ ದೈಹಿಕ ಸಂಪರ್ಕ ನಡೆಸಿ ವಂಚನೆ: ಆರೋಪಿಯ ಬಂಧನ

anish rehman
29/06/2023

ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಹೋಟೆಲ್ ರೂಂನಲ್ಲಿ 20 ದಿನಗಳ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಲ್ಲಿ ನಡೆದಿದೆ.

ಸಂತ್ರಸ್ತ ಯುವತಿಯು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಆರೋಪಿತ ಅನೀಶ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.

ಆರೋಪಿತನು ಹೋಟೆಲ್ ಗಳಲ್ಲಿ ಬಿಲ್ ಕೊಡದೆ ಪರಾರಿಯಾಗುವ ಚಟ ಹೊಂದಿದ್ದು ಆತನನ್ನು ಸಿಬ್ಬಂದಿ ಹಿಡಿದು ಹಾಕಿದ್ದರು. ಬಳಿಕ ಯುವತಿ ಬಳಿಯಿದ್ದ ಲ್ಯಾಪ್‌ ಟಾಪ್ ಅನ್ನು ಹೊಟೇಲಿನಲ್ಲಿ ಅಡವಿಟ್ಟು ಹೊರಬಂದಿದ್ದ. ಲ್ಯಾಪ್‌ ಟಾಪ್ ಕಾಣದಾಗಿದ್ದರಿಂದ ಯುವತಿ ಬಳಿ ಮನೆಯವರು ಪ್ರಶ್ನೆ ಮಾಡಿದ್ದರು. ಆ ಬಳಿಕ ಮನೆಯವರಿಗೆ ಇವರ ವಿಷಯ ತಿಳಿದು ಅನೀಶ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತನಿಗೆ ಮದುವೆಯಾಗಿರುವ ವಿಷಯ ತಿಳಿದುಬಂದಿತ್ತು.

ಬಳಿಕ ಮಹಿಳಾ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನೀಶ್ ವಿರುದ್ಧ ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧಿತನಾಗಿದ್ದು ಕಾವೂರು ಠಾಣೆಯಲ್ಲಿ ಪ್ರಕರಣ ಎದುರಿಸುತ್ತಿದ್ದಾನೆ.

ಇನ್ನು ಆರೋಪಿ ಅನೀಶ್ ರೆಹಮಾನ್ ವಿರುದ್ಧ ಕಾವೂರು ಠಾಣೆಯಲ್ಲಿ ಎನ್ ಡಿಪಿಎಸ್ ಅಡಿಯಲ್ಲೂ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ