ಪೆಟ್ರೋಲ್ ಬಂಕ್ ಗಳಲ್ಲಿ 2,000 ನೋಟಿನ ಹಾವಳಿ: ಕಂಗೆಟ್ಟ ಮಾಲಿಕರು!
ಬೆಂಗಳೂರು: 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿಐ ಹಿಂಪಡೆದ ನಂತರ ಪೆಟ್ರೋಲ್ ಬಂಕ್‌ಗಳಲ್ಲಿ ಪಿಂಕ್ ನೋಟಿನ ಹಾವಳಿ ಹೆಚ್ಚುತ್ತಿದೆ.ಇತ್ತ ಜನರು ಎಷ್ಟೇ ದುಡ್ಡಿನ ಪೆಟ್ರೋಲ್ ಹಾಕಿಸಿಕೊಂಡರೂ 2,000 ರೂ. ನೀಡುತ್ತಿರುವುದರಿಂದ ಪೆಟ್ರೋಲ್ ಬಂಕ್ ಮಾಲೀಕರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಈ ನೋಟ್ ಬ್ಯಾನ್ ಹಿನ್ನಲೆಯಲ್ಲಿ ಜನ ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್, ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಕೊಟ್ಟು ಬಚಾವ್ ಆಗುತ್ತಿದ್ದಾರಾದರೂ ಪೆಟ್ರೋಲ್ ಬಂಕ್ ಮಾಲೀಕರು ಕಂಗೆಟ್ಟಿದ್ದಾರೆ.
ಜನರು 100-200 ರೂ. ಪೆಟ್ರೋಲ್ ಹಾಕಿಸಿದರೂ 2,000 ರೂ. ಪಿಂಕ್ ನೋಟನ್ನು ಕೊಡುತ್ತಿದ್ದಾರೆ. ಇದರಿಂದ ಬಂಕ್ ಮಾಲೀಕರಿಗೆ ಚೇಂಜ್ ಸಮಸ್ಯೆ ಆಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw