2 ಸಾವಿರ ರೂಪಾಯಿಯ ನೋಟು ಹಿಂಪಡೆಯಲಿರುವ ಆರ್ ಬಿಐ: ಈ ದಿನಾಂಕದೊಳಗೆ 2 ಸಾವಿರ ರೂಪಾಯಿ ನೋಟು ಬದಲಿಸಿಕೊಳ್ಳಿ - Mahanayaka
3:26 AM Saturday 14 - December 2024

2 ಸಾವಿರ ರೂಪಾಯಿಯ ನೋಟು ಹಿಂಪಡೆಯಲಿರುವ ಆರ್ ಬಿಐ: ಈ ದಿನಾಂಕದೊಳಗೆ 2 ಸಾವಿರ ರೂಪಾಯಿ ನೋಟು ಬದಲಿಸಿಕೊಳ್ಳಿ

2000 Notes
19/05/2023

ನವದೆಹಲಿ: 2 ಸಾವಿರ ಮುಖ ಬೆಲೆಯ ನೋಟುಗಳ ಅಂತಿಮ ದಿನಗಳು ಸಮೀಪವಾಗಿದ್ದು, 2 ಸಾವಿರ ರೂಪಾಯಿಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಸೆಂಟ್ರಲ್ ಬ್ಯಾಂಕ್ ಹೇಳಿದ್ದು, ಸೆಪ್ಟಂಬರ್ 30ರೊಳಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ  2 ಸಾವಿರ ನೋಟುಗಳನ್ನು ಜಮಾ ಮಾಡಬಹುದಾಗಿದೆ.

ರಿಸರ್ವ್ ಬ್ಯಾಂಕ್(RBI) ಮತ್ತು  19 ಪ್ರಾದೇಶಿಕ ಕಚೇರಿಗಳು ಮೇ 23ರಿಂದ  2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆದುಕೊಳ್ಳಲು ಆರಂಭಿಸುತ್ತವೆ ಎಂದು ಆರ್ ಬಿ ಐ ತಿಳಿಸಿದೆ. ಅಲ್ಲದೇ 2 ಸಾವಿರ ರೂಪಾಯಿಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಲ್ಲ ಬ್ಯಾಂಕ್ ಗಳಿಗೆ ಆರ್ ಬಿಐ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ರಾತ್ರೋ ರಾತ್ರಿ  ಒಂದು ಸಾವಿರ ಮತ್ತು ಐದು ನೂರು ರೂಪಾಯಿಗಳ ನೋಟುಗಳನ್ನು  ರದ್ದುಗೊಳಿಸಿದ ನಂತರ ಆರ್ ಬಿ ಐ  2016ರ ನವೆಂಬರ್ ನಲ್ಲಿ 2 ಸಾವಿರ ರೂಪಾಯಿಗಳ ನೋಟು ಮುದ್ರಿಸಲು ಆರಂಭಿಸಿತ್ತು. ಇತರ ಮುಖ ಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಬಳಿಕ 2018—19ರಲ್ಲಿ 2 ಸಾವಿರ ರೂಪಾಯಿಯ ನೋಟುಗಳ ಮುದ್ರಣವನ್ನು ನಿಲ್ಲಿಸಲಾಯಿತು ಎಂದು ಆರ್ ಬಿ ಐ ತಿಳಿಸಿದೆ.

ಕಾರ್ಯ ನಿರ್ವಹಣೆಯ ಅನುಕೂಲತೆ ಖಚಿತಪಡಿಸಿಕೊಳ್ಳಲು ಹಾಗೂ ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಮೇ 23ರಿಂದ 2 ಸಾವಿರ ರೂಪಾಯಿಯ ನೋಟುಗಳನ್ನು ವಾಪಸ್ ಪಡೆಯಲಾಗುವುದು. ಗ್ರಾಹಕರು 2 ಸಾವಿರ ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು  ಆರ್ ಬಿಐ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ