ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಮಾರಾಟ ಮಾಡಲಾಯ್ತೆ? | ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ಏನು? - Mahanayaka
6:26 AM Thursday 19 - September 2024

ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಮಾರಾಟ ಮಾಡಲಾಯ್ತೆ? | ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ಏನು?

street performance
23/08/2021

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ, ವಿಡಿಯೋವೊಂದು ವೈರಲ್ ಆಗಿದ್ದು, ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಹರಾಜು ಹಾಕಲಾಗುತ್ತಿದೆ ಎಂದು ವಿಡಿಯೋದಲ್ಲಿ ಒಕ್ಕಣೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದೆ. ಆದರೆ, ಈ ವಿಡಿಯೋದ ಹಿಂದಿನ ಸತ್ಯಾಂಶ ಏನು ಎನ್ನುವುದು ಇದೀಗ ವರದಿಗಳಿಂದ ತಿಳಿದು ಬಂದಿದೆ.

ವೈರಲ್ ಆಗಿರುವ ವಿಡಿಯೋವು ಬೀದಿ ನಾಟಕವೊಂದರ ದೃಶ್ಯ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದ್ದು, ‘ಐಸಿಸ್ ನ ಲೈಂಗಿಕ ಜೀತದಾಳುಗಳ ಮಾರುಕಟ್ಟೆ’ ಎಂಬ ಬೀದಿ ನಾಟಕವನ್ನು 2014ರಲ್ಲಿ ಲಂಡನ್ ನಲ್ಲಿ ಪ್ರದರ್ಶಿಸಲಾಗಿತ್ತು. ಐಸಿಸ್ ನ ಕ್ರೌರ್ಯವನ್ನು ಜಗತ್ತಿಗೆ ತಿಳಿಸುವ ಪ್ರಯತ್ನವಾಗಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಇದು ಅಫ್ಘಾನ್ ಮಹಿಳೆಯರಿಗೆ ಸಂಬಂಧಿಸಿದ ವಿಡಿಯೋವಲ್ಲ ಎಂದು ತಿಳಿದು ಬಂದಿದೆ.

ತಾಲಿಬಾನ್ ನಲ್ಲಿ ಇಸ್ಲಾಂ ಷರಿಯ(ಇಸ್ಲಾಂ ಕಾನೂನು)ವನ್ನು ಅತ್ಯಂತ ಕಠಿಣವಾಗಿ ಆಚರಿಸುತ್ತಾರೆ. ಎಲ್ಲ ದೇಶಗಳಲ್ಲಿಯೂ ಮುಸ್ಲಿಮರು ಷರಿಯವನ್ನು ಪಾಲಿಸುತ್ತಾರೆ. ಆದರೆ, ತಾಲಿಬಾನ್ ನಲ್ಲಿ ಬಲವಂತವಾಗಿ ನಿಯಮಗಳನ್ನು ಹೇರುವ ಮೂಲಕ ಇಸ್ಲಾಮ್ ನ ನಿಜವಾದ ತತ್ವಕ್ಕೆ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತ ಸೇರಿದಂತೆ ಉಳಿದ ದೇಶದ ಮುಸ್ಲಿಮರು ತಾಲಿಬಾನ್ ನ್ನು ಒಪ್ಪಿಕೊಳ್ಳುವುದಿಲ್ಲ.


Provided by

ತಾಲಿಬಾನಿಗಳು ತಮ್ಮ ಧಾರ್ಮಿಕ ನಿಯಮಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾರೆ. ಮಹಿಳೆಯರು ಶಿಕ್ಷಣ ಪಡೆಯಬಾರದು, ಬುರ್ಖಾ ಧರಿಸಬೇಕು. ಮನೆಯಿಂದ ಒಬ್ಬರೇ ಹೊರಗೆ ಹೋಗಬಾರದು. ಪ್ರೀತಿಸಿ ಮದುವೆಯಾಗಬಾರದು. ಪುರುಷರು ಗಡ್ಡಬಿಡಬೇಕು. ಹೀಗೆ ನಾನಾ ರೀತಿಯ ಧಾರ್ಮಿಕ ಕಟ್ಟುಪಾಡುಗಳನ್ನು ಹೇರುತ್ತಿದ್ದಾರೆ. ಇದನ್ನು ಉಲ್ಲಂಘಿಸಿದರೆ, ಕ್ರೌರ್ಯ ಮೆರೆಯುತ್ತಾರೆ.

ಮನುಸ್ಮೃತಿಯಲ್ಲಿ ಹೇಗೆ ಕಠಿಣ ಕಾನೂನುಗಳನ್ನು ಹೇರಿ ಹಿಂಸೆಯನ್ನು ಮಾಡಲಾಗುತ್ತಿತ್ತೋ ಹಾಗೆಯೇ, ತಾಲಿಬಾನಿಗಳ ಷರಿಯ ಕಾನೂನು ಕೂಡ ಆಗಿದೆ. ಮನುಸ್ಮೃತಿ ಮತ್ತು ತಾಲಿಬಾನ್ ನ ಉಗ್ರರ ನಿಯಮಗಳನ್ನು ಗಮನಿಸಿದರೆ, ಬಹಳಷ್ಟು ಹೋಲಿಕೆಗಳು ಕಂಡು ಬರುತ್ತವೆ. ಮನುಸ್ಮೃತಿ ತಾಲಿಬಾನಿಗಳ ಕ್ರೌರ್ಯಕ್ಕಿಂತಲೂ ಕ್ರೂರವಾಗಿತ್ತು. ಮನುಸ್ಮೃತಿಯಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರ ಶಿಕ್ಷಣಕ್ಕೆ ಅವಕಾಶವಿರಲಿಲ್ಲ. ಅಸ್ಪೃಶ್ಯನೊಬ್ಬ ಮಂತ್ರೋಪದೇಶಗಳನ್ನು ಕದ್ದು ಕೇಳಿದರೆ, ಆತನ ಕಿವಿಗೆ ಕಾದ ಸೀಸವನ್ನು ಹಾಕಬೇಕು ಎನ್ನುವ ಕಠಿಣ ಶಿಕ್ಷೆಗಳಿದ್ದವು. ಕೈಗಳನ್ನು ಕತ್ತರಿಸುವುದು, ಕಾಲನ್ನು ಕತ್ತರಿಸುವುದು, ಶಿರಚ್ಛೇದನ ಮಾಡುವುದು ಹೀಗಿ ಕ್ರೌರ್ಯದ ಪರಮಾವಧಿಯೇ ಮನುಸ್ಮೃತಿಯಲ್ಲಿತ್ತು. ಈ ಕಾರಣಕ್ಕಾಗಿ ಅಂದು ಡಾ.ಬಿ.ಆರ್.ಅಂಬೇಡ್ಕರ್ ಅವರು  ಈ ಮನುಸ್ಮೃತಿಯನ್ನು ಸುಟ್ಟು, ಭಾರತಕ್ಕೆ ಶಾಂತಿಯುತವಾದ ಕಾನೂನನ್ನು ತಂದರು. ಹೀಗಾಗಿ ಇಂದು ಭಾರತೀಯರೆಲ್ಲರೂ ನೆಮ್ಮದಿಯಿಂದ ಉಸಿರಾಡುತ್ತಾ, ತಾಲಿಬಾನ್ ನ ಕಠಿಣ ಕಾನೂನಿನ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಈಗಲೂ ಆಗಾಗ, ಹೆಣ್ಣು ಮಕ್ಕಳು ಜೀನ್ಸ್ ಪ್ಯಾಂಟ್ ತೊಡಬಾರದು, ಪ್ರೇಮಿಗಳ ದಿನಾಚರಣೆ ಆಚರಿಸಬಾರದು, ಪ್ರೀತಿಸಿ ಮದುವೆಯಾಗಬಾರದು ಎಂಬಂತಹ ವಿಚಾರಗಳನ್ನೆತ್ತಿಕೊಂಡು ಭೀತಿ ಸೃಷ್ಟಿಸುತ್ತಿರುವ ಘಟನೆಗಳು ನಡೆಯುತ್ತಿವೆ.

ಇನ್ನಷ್ಟು ಸುದ್ದಿಗಳು…

ಅಪ್ರಾಪ್ತ ಬಾಲಕಿಯ ಮೊಬೈಲ್ ಗೆ ಅಶ್ಲೀಲ ಚಿತ್ರ ಕಳುಹಿಸಿದ ಮಹಿಳೆ | ಮಹಿಳೆಯ ವಿಲಕ್ಷಣ ಮನಸ್ಥಿತಿಗೆ ಬೆಚ್ಚಿಬಿದ್ದ ಪೋಷಕರು

ನಾಳೆಯಿಂದ ಶಾಲಾ ಕಾಲೇಜು ಆರಂಭ | ಕೊವಿಡ್ ಗೆ ಸೆಡ್ಡು ಹೊಡೆಯಲು ಸರ್ಕಾರದ ನಡೆಸಿರುವ ಸಿದ್ಧತೆ ಹೇಗಿದೆ ಗೊತ್ತಾ?

ಆಗಸ್ಟ್ 23ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ- ಪರ್ಯಾಯ ರಾಜಕಾರಣದ ಕುರಿತು ಒಂದು ಸಂವಾದ ಕಾರ್ಯಕ್ರಮ

ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು

ಮತ್ತೆ ಅಖಾಡಕ್ಕಿಳಿಯಲಿದ್ದಾರೆ WWE ಸೂಪರ್ ಸ್ಟಾರ್ ಸಿಎಂ ಫಂಕ್ | ಖುಷಿಯಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು

ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್

ಪಾನಿಗೆ ಮೂತ್ರ ಮಾಡಿದ ಜಗ್ ಮುಳುಗಿಸಿದ ಪಾನಿಪುರಿ ಮಾರಾಟಗಾರ: ಈ ವೈರಲ್ ವಿಡಿಯೋದ ಘಟನೆ ಎಲ್ಲಿ ನಡೆದದ್ದು ಗೊತ್ತೆ?

ಜಾತಿಯ ಆಧಾರದ ಮೇಲೆ ನೀಡುವ ಮೀಸಲಾತಿ ನಿಲ್ಲಿಸಬೇಕು | ಮುಖ್ಯಮಂತ್ರಿ ಚಂದ್ರು ಹೇಳಿಕೆ

ಇತ್ತೀಚಿನ ಸುದ್ದಿ