ಅಮೆರಿಕದಲ್ಲಿ ಟ್ರಂಪ್ ದುರಾಡಳಿತ ಅಂತ್ಯ | ಗೆಲುವಿನ ಹಾದಿಯಲ್ಲಿ ಜೋಯ್ ಬೀಡೆನ್
04/11/2020
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಡೊನಾಲ್ಡ್ ಟ್ರಂಪ್ ದುರಾಡಳಿತಕ್ಕೆ ಅಮೆರಿಕ ತಕ್ಕ ಪಾಠ ಕಲಿಸಿದ್ದು, ಡೆಮಾಕ್ರಟಿಕ್ ಪಕ್ಷದ ಜೋಯ್ ಬಿಡೆನ್ ಗೆಲುವಿನ ಹಾದಿಯಲ್ಲಿದ್ದಾರೆ.
ಒಟ್ಟು 500 ಸ್ಥಾನಗಳ ಚುನಾವಣೆಯಲ್ಲಿ 270 ಬಹುಮತದ ಅಂಕೆಯಾಗಿದೆ. ಈಗಾಗಲೇ ಬೀಡೆನ್ ಅವರು, 223 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ವಿಜಯದ ಹಾದಿಯ ಸಮೀಪದಲ್ಲಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 174 ಸ್ಥಾನಗಳನ್ನು ಮಾತ್ರವೇ ಪಡೆದುಕೊಂಡಿದ್ದಾರೆ.
ಬೀಡೆನ್ ಅವರು ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್, ಲಾಸ್ ಏಂಜಲೀಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಅಧ್ಯಕ್ಷನಾಗುವ ಆಸೆ ಹೊತ್ತಿದ್ದ ಟ್ರಂಪ್ ಆಸೆಗೆ ತಣ್ಣೀರೆಚಿದಂತಾಗಿದೆ. ಚುನಾವಣೆಗೂ ಮೊದಲು ಭಾರತವನ್ನು ಹೊಲಸು ಎಂದು ಕರೆದಿದ್ದ, ಟ್ರಂಪ್ ಗೆ ಅಮೆರಿಕದಲ್ಲಿ ಭಾರತೀಯರು ತಕ್ಕ ಪಾಠವನ್ನು ಕಲಿಸಿದ್ದಾರೆ.