ಬಹುನಿರೀಕ್ಷಿತ ಕಿಯಾ ಕಾರ್ನಿವಲ್ 2024 ಎಂಪಿವಿ ಕಾರು ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತಾ? - Mahanayaka
11:00 PM Wednesday 11 - December 2024

ಬಹುನಿರೀಕ್ಷಿತ ಕಿಯಾ ಕಾರ್ನಿವಲ್ 2024 ಎಂಪಿವಿ ಕಾರು ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತಾ?

kia carnival
03/10/2024

ಕಿಯಾ ಕಂಪನಿಯು ಭಾರತದಲ್ಲಿ ಕಾರ್ನಿವಲ್‌ 2024 ಎಂಪಿವಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆಗಳೇನು, ಇದರ ಬೆಲೆ ಎಷ್ಟು ಎಂಬ ವಿಚಾರಗಳನ್ನು ಇಂದು ತಿಳಿಯೋಣ.

2024ರ ಕಿಯಾ ಕಾರ್ನಿವಲ್‌ (Kia Ccarnival 2024) ಆರಂಭಿಕ ಎಕ್ಸ್‌ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಇದು ಲಿಮೊಸಿನ್‌ ಪ್ಲಸ್‌ ಆವೃತ್ತಿಯ ದರ. ಕಿಯಾ ಕಾರ್ನಿವಲ್‌ಗೆ ಮೂರು ವರ್ಷದ ವಾರೆಂಟಿ, ಮೂರು ವರ್ಷದ ಉಚಿತ ರೋಡ್‌ ಸೈಡ್‌ ಅಸಿಸ್ಟೆನ್ಸ್‌ ಮತ್ತು ಮೂರು ವರ್ಷದ ಉಚಿತ ಮೇಂಟೆನ್ಸ್‌ ಸೇವೆಯನ್ನು ಕಂಪನಿ ನೀಡುತ್ತಿದೆ.

2023ರಲ್ಲಿ ಹಿಂದಿನ ತಲೆಮಾರಿನ ಕಾರ್ನಿವಲ್‌ ಕಾರನ್ನು ಶೋರೂಂನಿಂದ ಕಿಯಾ ಕಂಪನಿ ವಾಪಸ್‌ತೆಗೆದುಕೊಡಿತ್ತು. 2020-23ರಲ್ಲಿ 14,542 ಕಾರ್ನಿವಲ್‌ ಕಾರುಗಳು ಮಾರಾಟವಾಗಿತ್ತು. ಈಗಾಗಲೇ ಹೊಸ ಕಾರ್ನಿವಲ್‌ ಅನ್ನು 2,796 ಗ್ರಾಹಕರು ಬುಕ್ಕಿಂಗ್‌ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಹೊಸ ಕಾರ್ನಿವಲ್‌ ಎಂಪಿವಿ ಜತೆಗೆ ಕಿಯಾ ಇವಿ9 ಎಲೆಕ್ಟ್ರಿಕ್‌ ಎಸ್‌ಯುವಿಯನ್ನೂ ಬಿಡುಗಡೆ ಮಾಡಿದೆ.

ಹೇಗಿದೆ  ಕಿಯಾ ಕಾರ್ನಿವಲ್‌ ಎಕ್ಸ್‌ಟೀರಿಯರ್‌?

2024ರ ಕಿಯಾ ಕಾರ್ನಿವಲ್‌ನ ಹೊರನೋಟ ಸಾಕಷ್ಟು ಬದಲಾಗಿದೆ. ಹಳೆಯ ಕಾರ್ನಿವಲ್‌ಗೆ ಹೋಲಿಸಿದರೆ ಸಾಕಷ್ಟು ಬೋಲ್ಡ್‌ ಆಗಿದೆ. ಮೊದಲ ನೋಟಕ್ಕೆ ಎಸ್‌ ಯುವಿಯತೆ ಕಾಣಿಸುತ್ತದೆ. ಎಸ್‌ ಯುವಿಯಿಂದ ಸ್ಪೂರ್ತಿ ಪಡೆದ ವಿನ್ಯಾಸ ಇದರದ್ದಾಗಿದೆ. ವಿಶಾಲವಾದ ಗ್ರಿಲ್‌ ಗಳಿಂದ ಕಾರು ಎದ್ದು ಕಾಣಿಸುತ್ತದೆ. ಇದರೊಂದಿಗೆ ಲಂಬವಾಗಿ ಜೋಡಿಸಿರುವ ಎಲ್‌ ಇಡಿ ಹೆಡ್‌ ಲೈಟ್‌ ಗಳು, ಎಲ್‌ ಆಕಾರದ ಡೇಟೈಮ್‌ ರನ್ನಿಂಗ್‌ ಲೈಟ್‌ಗಳು ಇವೆ. 18 ಇಂಚಿನ ಅಲಾಯ್‌ ವೀಲ್‌ನಿಂದ ಈ ಎಂಪಿವಿಯ ರೋಡ್‌ ಪ್ರೆಸೆನ್ಸ್‌ ಅದ್ಭುತವಾಗಿದೆ.

ಸೈಡ್‌ನಿಂದ ನೋಡಿದರೂ ನೂತನ ಕಾರ್ನಿವಲ್‌ ಆಕರ್ಷಕವಾಗಿ ಕಾಣಿಸುತ್ತದೆ. ಅಡ್ವೆಂಚರ್‌ ಪರ್ಸನಾಲಿಟಿಯತೆ ಕಾಣಿಸುತ್ತದೆ. ಹಿಂಭಾಗದಲ್ಲಿ ಕಿಯಾದ ಸಿಗ್ನೇಚರ್‌ ಎಲ್‌ ಇಡಿ ಟೇಲ್‌ ಲೈಟ್‌ ಗಳಿವೆ. ಕಿಯಾ ಸೆಲ್ಟೋಸ್‌, ಸೊನೆಟ್‌ ಬಳಿಕ ಸಾಕಷ್ಟು ಅಪ್‌ಡೇಟ್‌ ಆದ ವಿನ್ಯಾಸ ಕಾಣಿಸುತ್ತದೆ. ಒಟ್ಟಾರೆ ಸದೃಢ ಸ್ನಾಯುಗಳನ್ನು ತುಂಬಿಕೊಂಡ ದೃಢಕಾಯನಂತೆ ನೂತನ ಕಾರ್ನಿವಲ್‌ ಕಾಣಿಸುತ್ತದೆ.

ಕಿಯಾ ಕಾರ್ನಿವಲ್‌ನ ಇಂಟೀರಿಯರ್‌ ಕೂಡ ಅತ್ಯಾಕರ್ಷಕವಾಗಿದೆ. ಗುಣಮಟ್ಟದ ವಸ್ತುಗಳಿದ ನಿರ್ಮಾಣದ ಜತೆಗೆ ಅತ್ಯಾಧುನಿಕ ಟೆಕ್‌ ಫೀಚರ್‌ಗಳು ಗಮನ ಸೆಳೆಯುತ್ತವೆ. ಕಂದು ಮತ್ತು ಕಪ್ಪು ಥೀಮ್‌ನಲ್ಲಿ ಈ ಏಳು ಸೀಟಿನ ಎಂಪಿವಿಯನ್ನು ವಿನ್ಯಾಸ ಮಾಡಲಾಗಿದೆ.

ಕಾರ್ನಿವಲ್‌ ಫೀಚರ್ಸ್‌ ವಿಚಾರದಲ್ಲಿ ಗಮನ ಸೆಳೆಯುತ್ತದೆ. ಡ್ಯೂಯೆಲ್‌ ಪನೋರಾಮಿಕ್‌ ಡಿಸ್ಪ್ಲೇಗಳೊಂದಿಗೆ ಮೂರು ಸ್ಕ್ರೀನ್‌ ಗಳಿವೆ. 12.3 ಇಚಿನ ಇನ್‌ ಫೋಟೈನ್‌ ಮೆಂಟ್‌ ಸ್ಕ್ರೀನ್‌ ವೈರ್‌ ಲೆಸ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇಗೆ ಬೆಂಬಲ ನೀಡುತ್ತದೆ. 12.3 ಇಂಚಿನ ಡ್ರೈವರ್‌ ಡಿಸ್‌ ಪ್ಲೇ ಇದೆ. 12 ಸ್ಪೀಕರ್‌ ನ ಬಾಷ್‌ ಸೌಂಡ್‌ ಸಿಸ್ಟಮ್‌ ಇದೆ. 11 ಇಂಚಿನ ಹೆಡ್ಸ್‌ ಅಪ್‌ ಡಿಸ್‌ ಪ್ಲೇ ಕೂಡ ಇದೆ. ಮೊದಲ ಮತ್ತು ಎರಡನೇ ಸಾಲಿನಲ್ಲಿ ಪವರ್ಡ್‌ ಮತ್ತು ವೆಂಟಿಲೇಟೆಡ್‌ ಸೀಟುಗಳಿವೆ. ವೈರ್‌ಲೆಸ್‌ ಫೋನ್‌ ಚಾರ್ಜಿಂಗ್‌, 3 ವಲಯದ ಕ್ಲೈಮೇಟ್‌ ಕಂಟ್ರೋಲ್‌, ವಿದ್ಯುನ್ಮಾನವಾಗಿ ನಿರ್ವಹಿಸಬಹುದಾದ ಸ್ಲೈಡಿಂಗ್‌ ಡೋರ್‌ಗಳು, ಕನೆಕ್ಟೆಡ್‌ ಕಾರ್‌ ಫಂಕ್ಷನಾಲಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಇವೆ.

ಸುರಕ್ಷತೆಯ ವಿಷಯದಲ್ಲೂ 2024ರ ಕಾರ್ನಿವಲ್‌ ಗಮನ ಸೆಳೆಯುತ್ತದೆ. ಇದು ಎಂಟು ಏರ್‌ಬ್ಯಾಗ್‌ಗಳು, ಇಬಿಡಿ ಜತೆಗೆ ಎಬಿಎಸ್‌, ಆಲ್‌ ವೀಲ್‌ ಡಿಸ್ಕ್‌ ಬ್ರೇಕ್‌ಗಳು, ಟೈರ್‌ ಪ್ರೆಷರ್‌ ಮಾನಿಟರಿಂಗ್‌ ವ್ಯವಸ್ಥೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್‌ ಸೆನ್ಸಾರ್‌ಗಳು ಇವೆ. ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ, ಲೆವೆಲ್‌ 2 ಎಡಿಎಸ್‌ ವ್ಯವಸ್ಥೆ, 23 ಸುರಕ್ಷತಾ ಫೀಚರ್‌ಗಳು ಇವೆ. ಅಂದರೆ, ಮುಂಭಾಗಕ್ಕೆ ಪಲ್ಟಿಯಾಗುವುದನ್ನು ತಪ್ಪಿಸುವ ವ್ಯವಸ್ಥೆ, ಲೇನ್‌ ತಪ್ಪಿ ಪ್ರಯಾಣಿಸಿದರೆ ಎಚ್ಚರಿಸುವ ವ್ಯವಸ್ಥೆ, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಮುಂತಾದ ಫೀಚರ್‌ಗಳಿವೆ.

ಇದು 22 ಲೀಟರ್‌ನ ಡೀಸೆಲ್‌ ಎಂಜಿನ್‌ ಹೊಂದಿದೆ. 190 ಬಿಎಚ್‌ಪಿ ಮತ್ತು 441 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. 8 ಸ್ಪೀಡ್‌ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಇದೆ. ಭಾರತದಲ್ಲಿ ಇದು ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 3.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಇದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ