21 ವರ್ಷ ಜೊತೆಗಿದ್ದ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ! - Mahanayaka
1:30 AM Wednesday 5 - February 2025

21 ವರ್ಷ ಜೊತೆಗಿದ್ದ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!

devaraj
28/06/2022

ಮೈಸೂರು:  21 ವರ್ಷಗಳವರೆಗೆ ತನ್ನೊಂದಿಗೆ ಸಂಸಾರ ನಡೆಸಿದ್ದ ಪತ್ನಿಯನ್ನು ಪಾಪಿ ಪತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪತ್ನಿ 40 ವರ್ಷ ವಯಸ್ಸಿನ ಪುಟ್ಟಮ್ಮ ಅವರನ್ನು ರುಂಡಮುಂಡ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಚೆಟ್ಟನಹಳ್ಳಿಯ ದೇವರಾಜ್ ಎಂಬಾತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.

ತನ್ನ ಮೊದಲ ಪತ್ನಿಯನ್ನೂ ಹತ್ಯೆ ಮಾಡಲು ಯತ್ನಿಸಿ ಜೈಲು ಶಿಕ್ಷೆ ಅನುಭವಿಸಿದ್ದ ದೇವರಾಜ್, ಆ ಬಳಿಕ ಎರಡನೇ ಮದುವೆಯಾಗಿದ್ದ. ಎರಡನೇ ಮದುವೆಯಾದರೂ ತನ್ನ ಹಳೆಯ ಬುದ್ಧಿ ಬಿಟ್ಟಿರಲಿಲ್ಲ. ಪತ್ನಿಯ ಶೀಲದ ಮೇಲೆ ಶಂಕಿಸಿ ಸದಾ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಕಳೆದ ಒಂದು ತಿಂಗಳಿನಿಂದ ದೇವರಾಜ್ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಸೋಮವಾರ ಕಾಲೇಜಿಗೆ ಹೋಗಿದ್ದಳು. ಈ ವೇಳೆ ಪತ್ನಿ ಜತೆ ಜಗಳ ತೆಗೆದಿದ್ದ. ರಾತ್ರಿ ಮನೆಯಲ್ಲೇ ಪತ್ನಿಯ ರುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಂದೆ ವಿರುದ್ಧ ಮಗಳು ಪವಿತ್ರಾ, ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಘಟನೆಯ ಬಳಿಕ ಆರೋಪಿ ದೇವರಾಜ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಲೆಗಳಿಗೆ ರಜೆ, ಪೆಟ್ರೋಲ್ ಗಾಗಿ ಕಾದು ಕುಳಿತ ಜನರು: ಶ್ರೀಲಂಕಾದ ದುಸ್ಥಿತಿ!

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆಲಿಯಾ ಭಟ್!

ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು!

ಟ್ರಕ್ ನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ 46 ಕಾರ್ಮಿಕರು!

ಕಾಂಗ್ರೆಸ್ ಗೆ ಮತ ನೀಡಿ ನಿಮ್ಮ ಮತ ವ್ಯರ್ಥ ಮಾಡಬೇಡಿ: ಅಸಾದುದ್ದೀನ್ ಓವೈಸಿ

 

 

ಇತ್ತೀಚಿನ ಸುದ್ದಿ