ಯುವತಿಯನ್ನು ಅಪಹರಿಸಿ 22 ಮಂದಿಯಿಂದ ದಿನವಿಡೀ ಅತ್ಯಾಚಾರ: 6 ಮಂದಿ ಅರೆಸ್ಟ್

ನವದೆಹಲಿ: 19 ವರ್ಷದ ಯುವತಿಯನ್ನು ಅಪಹರಿಸಿದ ಸುಮಾರು 22 ಮಂದಿ ದಿನವಿಡೀ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಉತ್ತರ ವಾರಣಾಸಿಯ ಲಾಲ್ ಪುರ್ ಪ್ರದೇಶದ ನಿವಾಸಿ ಯುವತಿ ಕಳೆದ ಮಾರ್ಚ್ 29ರಂದು ತನ್ನ ಸ್ನೇಹಿತರನ್ನು ಭೇಟಿಯಾಗಲು ಮನೆಯಿಂದ ಹೋಗಿದ್ದಳು. ಅದಂತೆ ಹಲವು ಬಾರಿ ತನ್ನ ಸ್ನೇಹಿತರನ್ನ ಭೇಟಿಯಾಗಿ ಯಾವುದೇ ಅಪಾಯವಿಲ್ಲದೇ ಮನೆಗೆ ಸುರಕ್ಷಿತವಾಗಿ ಬಂದಿದ್ದಳು. ಆದರೆ ಆ ದಿನ ಮನೆಯಿಂದ ಹೋದಾಕೆ ಮನೆಗೆ ಮರಳಲು ಸಾಧ್ಯವಾಗಿಲ್ಲ. ಊರೆಲ್ಲ ಹುಡುಕಾಡಿದರೂ ಆಕೆಯ ಸುಲಿವಿರಲಿಲ್ಲ. ಹೀಗಾಗಿ ಏಪ್ರಿಲ್ 4ರಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ದೂರು ನೀಡಿದ ಅದೇ ದಿನ ಯುವತಿಯನ್ನು ಡ್ರಗ್ಸ್ ನೀಡಿ ಮನೆಗೆ ಕಳುಹಿಸಿದ್ದಾರೆ. ಬಳಿಕ ತನ್ನ ಸ್ನೇಹಿತೆಯನ್ನು ಭೇಟಿಯಾದ ಸಂತ್ರಸ್ತೆ ಮನೆಗೆ ಬಂದು ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ.
ದೂರಿನಲ್ಲಿ ತನ್ನ ಮೇಲೆ 22 ಮಂದಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿದ ದಿನವೇ ಹುಕ್ಕಾ ಬಾರ್, ಹೊಟೇಲ್, ಲಾಡ್ಜ್ ಮತ್ತು ಅತಿಥಿ ಗೃಹ ಸಹಿತ ವಿವಿಧೆಡೆ ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: