22 ವರ್ಷವಾಗದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಬಾರದು | ಶೋಭಾ ಕರಂದ್ಲಾಜೆ
ಉಡುಪಿ: 22 ವರ್ಷ ವಯಸ್ಸು ಆಗುವ ಮೊದಲು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು, ಕೇಂದ್ರ ಸರ್ಕಾರ ಇತ್ತೀಚೆಗೆ ಹೆಣ್ಣು ಮಕ್ಕಳ ಮದುವೆ ವಯಸ್ಸಿಗೆ ಏರಿಸಿರುವ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರದ ಈ ಹೊಸ ಆದೇಶದ ವಿರುದ್ಧ ಸ್ವರ್ಣವಲ್ಲಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದೇಶದಲ್ಲಿ 18 ವರ್ಷದಲ್ಲೇ ಮದುವೆ ಮಾಡಿಸುತ್ತಾರೆ ಎಂಬ ಅಭಿಪ್ರಾಯ ತಪ್ಪು. ಸ್ವರ್ಣವಲ್ಲಿ ಸ್ವಾಮೀಜಿ ಹೇಳಿಕೆಗೆ ನಾನು ವಿರೋಧ ಮಾಡುತ್ತಿಲ್ಲ ಎಂದು ಹೇಳಿದರು.
ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈ ಕಾನೂನು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ದೇಶದ ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದರೆ, ಗರ್ಭಪಾತವಾಗಬಹುದು, ಬಾಣಂತಿಯರ ಮರಣ ಕೂಡ ಹೆಚ್ಚಾಗಿದೆ. ವೈಜ್ಞಾನಿಕ ವರದಿ ಅಧ್ಯಯನ ಮಾಡಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!
ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ!
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ “ಕರುನಾಡ ರತ್ನ” ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ
ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ
ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!