25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ? - Mahanayaka
3:00 PM Wednesday 11 - December 2024

25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ?

arrested
21/07/2021

ನವದೆಹಲಿ: ಗೋವಾ ಮೂಲದ ಬಾಣಸಿಗನೋರ್ವನನ್ನು 25-30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ  ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಮಕ್ಕಳಿಗೆ ಕಿರುಕುಳ ನೀಡಿ ವಿಡಿಯೋ ಚಿತ್ರೀಕರಿಸಿ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿದ ಆರೋಪ ಕೇಳಿ ಬಂದಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಚಿತ್ರೀಕರಿಸಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಹಾಗೂ ಡಾರ್ಕ್ ವೆಬ್  ಮೂಲಕ ಭಾರತೀಯರಿಗೆ ಹಾಗೂ ವಿದೇಶಿಯರಿಗೆ ಈತ ವಿಡಿಯೋ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಗೋವಾದ ಹೊಟೇಲೊಂದರಲ್ಲಿ ಬಾಣಸಿಗನಾಗಿರುವ 29 ವರ್ಷ ವಯಸ್ಸಿನ ಆರೋಪಿಯ ವಿರುದ್ಧ ಕಳೆದ ವರ್ಷ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಉತ್ತರ ಪ್ರದೇಶದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಆಗಿರುವ ಚಿತ್ರಕೂಟ್ ಮೂಲದ ಆರೋಪಿಯನ್ನು  ಸಿಬಿಐ ತನಿಖೆಗೆ ಒಳಪಡಿಸಿದಾಗ ಈ ಬಾಣಸಿಗನ ಮಾಹಿತಿ ದೊರೆತಿದೆ ಎಂದು ತಿಳಿದು ಬಂದಿದೆ.

ಇನ್ನೂ ಈತನಿಂದ ಕಿರುಕುಳಕ್ಕೊಳಗಾಗಿರುವ 12ರಿಂದ 21 ವರ್ಷ ವಯಸ್ಸಿನ ಸಂತ್ರಸ್ತರನ್ನು  ಸಿಬಿಐ ಗುರುತಿಸಿದೆ. ಇನ್ನು ಕೆಲವು ಸಂತ್ರಸ್ತರು, ಸಮಾಜಕ್ಕೆ ಹೆದರಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಸಿಬಿಐ ತಿಳಿಸಿದೆ.

ಸದ್ಯ ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯನ್ನು ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ,  ಮೊಬೈಲ್, ಡಿಜಿಟಲ್ ಕ್ಯಾಮೆರಾ ಮತ್ತಿತರ ಕ್ಯಾಮರಗಳನ್ನು ಬಳಸಿ ಚಿತ್ರೀಕರಿಸಿದ್ದಾನೆ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ತಿಳಿಸಿದ್ದಾರೆ.

ಇನ್ನೂ ಈತ ಭಾರತೀಯರು ವಿದೇಶಿಯರೊಂದಿಗಿನ ಲೈಂಗಿಕ ಚಿತ್ರಗಳು ಮತ್ತು ಮಕ್ಕಳ ಲೈಂಗಿಕ ಕಿರುಕುಳದ ವಿಡಿಯೋಗಳನ್ನು ಕೂಡ ಮಾರಾಟ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆಯಷ್ಟೇ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಾಗೂ ಅಶ್ಲೀಲ ಚಿತ್ರ ತಯಾರಕರಿಗೆ ಇದೀಗ ದೇಶದಲ್ಲಿ ನಡುಕ ಸೃಷ್ಟಿಯಾಗಿದೆ. ಅಶ್ಲೀಲ ಚಿತ್ರಗಳ ಪ್ರೇರಣೆಯಿಂದ ಸಾಕಷ್ಟು ಲೈಂಗಿಕ ಕಿರುಕುಳಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಮಕ್ಕಳ ಮೇಲೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿದೆ.

ಇನ್ನಷ್ಟು ಸುದ್ದಿಗಳು…

ಶಿಲ್ಪಾ ಶೆಟ್ಟಿ ಗಂಡ ಮಾಡುತ್ತಿದ್ದದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕಕಾರಿ ವಿಡಿಯೋ | ಮಾಡೆಲ್ ಹೇಳಿದ್ದೇನು?

ಶಿಲ್ಪಾ ಶೆಟ್ಟಿಯ ಗಂಡ ಹಣ ಮಾಡಿದ್ದು ಹೇಗೆ? | ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ವಿಡಿಯೋ ವೈರಲ್

ನಳಿನ್ ಕುಮಾರ್ ಕಟೀಲ್ ಆಡಿಯೋ ಸೋರಿಕೆ ಮಾಡಿದ್ದು ಇವರಂತೆ!

ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ

ಇತ್ತೀಚಿನ ಸುದ್ದಿ