ಆಲಿಕಲ್ಲು ಮಳೆ, ಸಿಡಿಲಬ್ಬರಕ್ಕೆ 25 ಮಂದಿ ಸಾವು

11/04/2025
ಬಿಹಾರ: ಧಾರಾಕಾರ ಮಳೆ, ಆಲಿಕಲ್ಲು ಮಳೆ, ಬಿರುಗಾಳಿ, ಸಿಡಿಲಿನಬ್ಬರಕ್ಕೆ ಕನಿಷ್ಠ 25 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ನಾನಾ ಜಿಲ್ಲೆಗಳಲ್ಲಿ ಸಂಭವಿಸಿದೆ.
ಪಾಟ್ನಾ,ಭೋಜ್ ಪುರ, ಬಕ್ಸರ್, ಸಸಾರಾಮ್, ಛಾಪ್ರಾ, ಕೈಮೂರ್, ಸೀತಾಮರ್ಹಿ, ಶಿವಾರ್, ದರ್ಬಂಗಾ, ಸಹರ್ಸಾ, ಮಧುಬನಿ ಮತ್ತು ಅರಾರಿಯಾ ಮತ್ತಿತರ ಜಿಲ್ಲೆಗಳಲ್ಲಿ ಗುಡುಗು ಮಳೆಗೆ ಜನರು ತತ್ತರಿಸಿದ್ದಾರೆ.
ಸಿವಾನ್ ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ನಳಂದ ಜಿಲ್ಲೆಯೊಂದರಲ್ಲೇ 18 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 25 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD