ನಕಲಿ ಉದ್ಯೋಗ ಹಗರಣ ಪ್ರಕರಣ: ಕಾಂಬೋಡಿಯಾದಿಂದ 250 ಭಾರತೀಯರ ರಕ್ಷಣೆ - Mahanayaka
11:12 AM Saturday 21 - September 2024

ನಕಲಿ ಉದ್ಯೋಗ ಹಗರಣ ಪ್ರಕರಣ: ಕಾಂಬೋಡಿಯಾದಿಂದ 250 ಭಾರತೀಯರ ರಕ್ಷಣೆ

31/03/2024

ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಕಾಂಬೋಡಿಯಾದಲ್ಲಿ ನಕಲಿ ಉದ್ಯೋಗಾವಕಾಶಗಳ ಭರವಸೆಗಳಿಂದ ಆಮಿಷಕ್ಕೊಳಗಾಗಿದಲ್ ಕಾನೂನುಬಾಹಿರ ಸೈಬರ್ ಚಟುವಟಿಕೆಗಳಲ್ಲಿ ತೊಡಗುವಂತೆ ಒತ್ತಾಯಿಸಲ್ಪಟ್ಟಿದ್ದ ನೊಂದ ಭಾರತೀಯ ನಾಗರಿಕರ ಕುಂದುಕೊರತೆಗಳನ್ನು ಸಕ್ರಿಯವಾಗಿ ಪರಿಹರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಸುಮಾರು 250 ಭಾರತೀಯರನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದ್ದು, ಅವರಲ್ಲಿ 75 ಮಂದಿಯನ್ನು ಕಳೆದ ಮೂರು ತಿಂಗಳಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಎಂಇಎ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಎಂಇಎ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, “ಕಾಂಬೋಡಿಯಾದಲ್ಲಿರುವ ನಮ್ಮ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಂದ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದೆ” ಎಂದಿದ್ದಾರೆ.
“ಕಾಂಬೋಡಿಯನ್ ಅಧಿಕಾರಿಗಳೊಂದಿಗೆ ನಿಕಟವಾಗಿ ಸಹಕರಿಸಿ, ಇದು ಸುಮಾರು 250 ಭಾರತೀಯರನ್ನು ರಕ್ಷಿಸಿದೆ ಮತ್ತು ಸ್ವದೇಶಕ್ಕೆ ಕಳುಹಿಸಿದೆ, ಅದರಲ್ಲಿ 75 ಕಳೆದ ಮೂರು ತಿಂಗಳಲ್ಲಿ” ಎಂದು ಅವರು ಹೇಳಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ