25ನೇ ಮಹಡಿಯಿಂದ ಬಿದ್ದು ಅವಳಿ ಸಹೋದರರ ಸಾವು
ಗಾಝಿಯಾಬಾದ್: 14 ವರ್ಷ ವಯಸ್ಸಿನ 9ನೇ ತರಗತಿ ವಿದ್ಯಾರ್ಥಿಗಳಾದ ಅವಳಿ ಸಹೋದರರಿಬ್ಬರು ತಮ್ಮ ಅಪಾರ್ಟ್ ಮೆಂಟ್ ನ 25ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಶನಿವಾರ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಇಲ್ಲಿನ ಸಿದ್ಧಾರ್ಥ್ ವಿಹಾರ್ ಅಪಾರ್ಟ್ ಮೆಂಟ್ ಸಂಕೀರ್ಣದಿಂದ ಅವಳಿ ಸಹೋದರರಾದ ಸತ್ಯನಾರಾಯಣ್ ಹಾಗೂ ಸೂರ್ಯನಾರಾಯಣ್ ಇಬ್ಬರೂ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆಯ ವೇಳೆ ಮಕ್ಕಳ ತಂದೆ ಮುಂಬೈಯಲ್ಲಿದ್ದರು. ಮನೆಯಲ್ಲಿ ಮಕ್ಕಳ ತಾಯಿ ಹಾಗೂ ಸಹೋದರಿ ಇದ್ದರು ಎಂದು ತಿಳಿದು ಬಂದಿದೆ. ಇವರು ಹೇಗೆ ಮಹಡಿಯಿಂದ ಕೆಳಗೆ ಬಿದ್ದರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಮಹಿಳೆಯೊಂದಿಗಿನ ತನ್ನ ಖಾಸಗಿ ಚಿತ್ರವನ್ನು ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡಿದ ಶಿಕ್ಷಕ!
KSRTCಯಲ್ಲಿ ಕೆಲಸದ ಆಫರ್ ನೀಡಿ 500 ಮಂದಿಯನ್ನು ವಂಚಿಸಿದ ಇಬ್ಬರು ಅರೆಸ್ಟ್
ಪತ್ನಿಯ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಕೌಟುಂಬಿಕ ಜಗಳ ದುರಂತ ಅಂತ್ಯ
ಭಾರೀ ಮಳೆ, ಭೂಕುಸಿತಕ್ಕೆ ಕೇರಳದಲ್ಲಿ 18 ಮಂದಿ ಬಲಿ: ಕೇರಳದಲ್ಲಿ ಇಂದು ಕೂಡ ರೆಡ್ ಅಲಾರ್ಟ್!
ಬಸ್ – ಮ್ಯಾಕ್ಸಿಕ್ಯಾಬ್ ನಡುವೆ ಭೀಕರ ಅಪಘಾತ ಮೂವರು ರೈತರ ದಾರುಣ ಸಾವು
ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ
ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆ | ನಾಯಕತ್ವದ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ