ಅಪ್ರಾಪ್ತೆಗೆ ವಾಹನ ಚಲಾಯಿಸಲು ನೀಡಿ ಅಪಘಾತಕ್ಕೆ ಕಾರಣವಾದ ಮಾಲಕರಿಗೆ 26 ಸಾವಿರ ರೂ. ದಂಡ
ಅಪ್ರಾಪ್ತೆಗೆ ವಾಹನ ಚಲಾಯಿಸಲು ನೀಡಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ವಾಹನ ಮಾಲಕರಿಗೆ ನ್ಯಾಯಾಲಯ ಸಾವಿರಾರು ರೂಪಾಯಿ ದಂಡ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಕಾನೂನು ಬಾಹಿರವಾಗಿ ಅಪ್ರಾಪ್ತ ಬಾಲಕಿಗೆ ವಾಹನ ಚಲಾಯಿಸಲು ನೀಡಿದ ಕಾರಣಕ್ಕಾಗಿ ಮಾಲಕಿಗೆ ಬಂಟ್ವಾಳ ನ್ಯಾಯಾಲಯ 26,000 ದಂಡ ವಿಧಿಸಿದೆ. ಸಿದ್ದಕಟ್ಟೆ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಯವಾಗಿತ್ತು.
ಕಾರು ಚಾಲಕನ ದುಡುಕುತನದ ಚಾಲನೆಯಿಂದ ಬಾಲಕಿ ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿ ಗಾಯವುಂಟಾಗಿತ್ತು. ಅಪ್ರಾಪ್ತ ಬಾಲಕಿ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಸಂಭವಿಸಿದ ಕಾರಣಕ್ಕಾಗಿ ಮೆಲ್ಕಾರ್ ಟ್ರಾಫಿಕ್ ಪೋಲಿಸರು ನೋಟೀಸ್ ಜಾರಿ ಮಾಡಿದ್ದರು.
ಆಗಸ್ಟ್ ತಿಂಗಳಿನಲ್ಲಿ ಸಿದ್ದಕಟ್ಟೆಯಲ್ಲಿ ಟ್ರಾಫಿಕ್ ಪೋಲಿಸರು ನೋಟೀಸ್ ನೀಡಿದ್ದು, ಇದೀಗ ನ್ಯಾಯಾಲಯ ಬಾಲಕಿಯ ತಾಯಿ ಯಶೋಧ ಅವರಿಗೆ ದಂಡ ಕಟ್ಟುವಂತೆ ನೋಟೀಸ್ ಜಾರಿ ಮಾಡಿದೆ. ಟ್ರಾಫಿಕ್ ಎ.ಎಸ್.ಐ.ವಿಜಯ ಅವರು ಪ್ರಕರಣ ದ ತನಿಖಾಧಿಕಾರಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka