ಭೀಕರ ಅಪಘಾತ ಖ್ಯಾತ ನಟಿ ಡಾಲಿ ಡಿಕ್ರೂಜ್ ಸೇರಿದಂತೆ ಮೂವರ ದಾರುಣ ಸಾವು!
ಖ್ಯಾತ ತೆಲುಗು ನಟಿ ಗಾಯತ್ರಿ ಅವರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದು, ಅವರ ಸ್ನೇಹಿತ ಹಾಗೂ ಮತ್ತೋರ್ವ ಮಹಿಳೆ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗಚ್ಚಿಬೌಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ 26 ವರ್ಷ ವಯಸ್ಸಿನ ಗಾಯತ್ರಿ ಮೃತಪಟ್ಟಿದ್ದರು. ಇವರನ್ನು ಡಾಲಿ ಡಿಕ್ರೂಜ್ ಎಂದು ಕರೆಯಲಾಗುತ್ತಿದ್ದು, ತೆಲುಗು ಚಿತ್ರರಂಗದಲ್ಲಿ ಉತ್ತಮ ಹೆಸರು ಹೊಂದಿದ್ದರು. ಹೋಳಿ ಸಂಭ್ರಮಾಚರಣೆ ಮುಗಿಸಿ ಸ್ನೇಹಿತನ ಜತೆ ಮನೆಗೆ ಮರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ.
ಅಪಘಾತದ ಪರಿಣಾಮ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತ ರಾಥೋಡ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಕೂಡ ಉಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಕಾರು ನಿಯಂತ್ರಣ ತಪ್ಪಿ ಪಾದಚಾರಿ ಮಹಿಳೆಯ ಮೇಲೆ ಹತ್ತಿದ್ದು, ಪರಿಣಾಮವಾಗಿ 38 ವರ್ಷದ ಮಹಿಳೆಯೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಈ ಅಪಘಾತದಲ್ಲಿ ಒಟ್ಟು 3 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಪ್ರಕಾಶ್ ರಾಜ್ ಹೇಳಿಕೆ ವೈರಲ್!
ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
ಪರೀಕ್ಷೆಗೆ ಹೋದ 15 ವರ್ಷದ ಹುಡುಗಿಗೆ ಮದುವೆ : ವರ ಬಂಧನ
ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದಿಕ್ಕಿದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್
ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್