ದ್ವಿತೀಯ ಪಿಯು ಪರೀಕ್ಷೆಯಲ್ಲೂ ಹಿಜಾಬ್ ಗೆ ಅವಕಾಶವಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ - Mahanayaka
10:08 PM Thursday 14 - November 2024

ದ್ವಿತೀಯ ಪಿಯು ಪರೀಕ್ಷೆಯಲ್ಲೂ ಹಿಜಾಬ್ ಗೆ ಅವಕಾಶವಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

bc nagesh
07/04/2022

ಬೆಂಗಳೂರು: ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷಾ ಕೇಂದ್ರದಲ್ಲಿ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ರೀತಿಯಲ್ಲಿಯೇ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಹಿಜಾಬ್ ಗೆ ಅವಕಾಶವಿಲ್ಲ. ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ ಎಂದಿದ್ದಾರೆ.

ಶಿಕ್ಷಣ ಇಲಾಖೆ ಹೊರಡಿಸಲಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ರಾಜ್ಯದ ಜಿಲ್ಲಾ ಕಾಲೇಜುಗಳಲ್ಲಿ ಶೇ.90 ರಷ್ಟು ಸಮವಸ್ತ್ರ ಇದೆ. ಶೇ.10 ರಷ್ಟು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ಇಲ್ಲ. ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ. ಕೋರ್ಟ್ ಸೂಚನೆಯಂತೆ ಸಮವಸ್ತ್ರ ಪಾಲನೆ ಕಡ್ಡಾಯ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಹೀಂ ಉಚ್ಚಿಲ್ ಗೆ ಸದ್ದಿಲ್ಲದೇ ಶಾಕ್ ನೀಡಿದ ರಾಜ್ಯ ಸರ್ಕಾರ

ಕೊಲೆಯಾದ ಯುವಕನನ್ನು ದಲಿತ ಅಂದ್ರಿ, ಹಿಂದೂ ಅನ್ನಲಿಲ್ಲ ಯಾಕೆ? : ಕುಮಾರಸ್ವಾಮಿ

ನಿರ್ದೇಶಕ, ನಟ ಶ್ರೀನಿವಾಸನ್ ಅವರ ಆರೋಗ್ಯ ಸ್ಥಿತಿ ಗಂಭೀರ

ಉತ್ತರ ಪತ್ರಿಕೆಯಲ್ಲಿ “ಪುಷ್ಪಾ… ಪುಸ್ಪರಾಜ್” ಎಂದು ಬರೆದಿಟ್ಟ ವಿದ್ಯಾರ್ಥಿನಿ: ಶಿಕ್ಷಕರು ಕಂಗಾಲು

ಮೀನು ಹಿಡಿಯಲು ತೆರಳಿದ್ದ ಯುವಕ ಬಲೆಯಲ್ಲಿ ಸಿಲುಕಿ ಸಾವು

ಎರಡು ತಲೆ ಹಾವು ಮಾರಾಟ ಯತ್ನ ಆರೋಪಿಗಳ ಬಂಧನ

.

ಇತ್ತೀಚಿನ ಸುದ್ದಿ