ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ - Mahanayaka

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

2nd pu exam
08/04/2022

ಬೆಂಗಳೂರು: ಏ. 22ರಿಂದ‌ ಮೇ 18ರವರೆಗೆ ನಡೆಯಲಿರುವ  ದ್ವಿತೀಯ ಪಿಯುಸಿ  ಅಂತಿಮ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.


Provided by

ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಮಾತ್ರ ಅದಲು ಬದಲು ಮಾಡಿದೆ. ಕೆಲ‌ ತಾಂತ್ರಿಕ ತೊಂದರೆಗಳಿಂದ ಪರೀಕ್ಷೆ ದಿನಾಂಕ ಮಾತ್ರ ಬದಲಾವಣೆಯಾಗಿದೆ ಎಂದು ಪಿಯು ಬೋರ್ಡ್ (PUC Board) ಮಾಹಿತಿ ನೀಡಿದೆ.

ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.


Provided by

ದಿನಾಂಕ ಬದಲಾದ ವಿಷಯಗಳು:

ಏ22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏ. 23 – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ

ಏ. 25 – ಅರ್ಥಶಾಸ್ತ್ರ

ಏ. 26 – ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ

ಏ. 28 – ಕನ್ನಡ

ಮೇ 4 – ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮೇ 5 – ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್

ಮೇ. 6 – ಇಂಗ್ಲಿಷ್

ಮೇ 10 – ಇತಿಹಾಸ, ಭೌತಶಾಸ್ತ್ರ

ಮೇ 12 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮೇ 14 – ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ

ಮೇ 17 – ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ

ಮೇ 18 – ಹಿಂದಿ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುವೈತ್ ನಲ್ಲಿ ವಿಜಯ್ ನಟನೆಯ ಬೀಸ್ಟ್ ಚಿತ್ರಕ್ಕೆ ನಿಷೇಧ: ಕಾರಣ ಏನು ಗೊತ್ತಾ?

‘ನಮ್ಮ ಭೂಮಿ ನಮ್ಮ ಆರೋಗ್ಯ’; ಇಂದು ವಿಶ್ವ ಆರೋಗ್ಯ ದಿನ

ರಹೀಂ ಉಚ್ಚಿಲ್ ಗೆ ಸದ್ದಿಲ್ಲದೇ ಶಾಕ್ ನೀಡಿದ ರಾಜ್ಯ ಸರ್ಕಾರ

ಕೊಲೆಯಾದ ಯುವಕನನ್ನು ದಲಿತ ಅಂದ್ರಿ, ಹಿಂದೂ ಅನ್ನಲಿಲ್ಲ ಯಾಕೆ? : ಕುಮಾರಸ್ವಾಮಿ

ನಿರ್ದೇಶಕ, ನಟ ಶ್ರೀನಿವಾಸನ್ ಅವರ ಆರೋಗ್ಯ ಸ್ಥಿತಿ ಗಂಭೀರ

ಇತ್ತೀಚಿನ ಸುದ್ದಿ