ಎರಡನೇ ಮದುವೆಯಾದ ಮಹಿಳೆಗೆ “ನಮ್ಮ ಎಂಜಲು ನೆಕ್ಕು” ಎಂದ ಪಂಚಾಯತ್ ಸದಸ್ಯರು! - Mahanayaka
7:00 PM Friday 20 - September 2024

ಎರಡನೇ ಮದುವೆಯಾದ ಮಹಿಳೆಗೆ “ನಮ್ಮ ಎಂಜಲು ನೆಕ್ಕು” ಎಂದ ಪಂಚಾಯತ್ ಸದಸ್ಯರು!

casteism
14/05/2021

ಮುಂಬೈ: ಇವರೆಲ್ಲ ಪಂಚಾಯತ್ ಸದಸ್ಯರಂತೆ! ಚಿಕ್ಕ ವಯಸ್ಸಿನಲ್ಲಿ ಸರಿಯಾಗಿ ಶಾಲೆಗೆ ಹೋಗಿದ್ದರೆ, ಕನಿಷ್ಠ ಮನುಷ್ಯರಾಗಿಯಾದರೂ ಬದುಕುತ್ತಿದ್ದರೋ ಏನೋ? ಇಂತಹ ಆಕ್ರೋಶದ ಮಾತುಗಳು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ಬೆನ್ನಲ್ಲೇ ಕೇಳಿ ಬಂದಿದೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾದ ಮಹಿಳೆಯೊಬ್ಬರಿಗೆ ಸ್ಥಳೀಯ ಪಂಚಾಯತ್ ಸದಸ್ಯರು ಎಂಜಲು ನೆಕ್ಕುವ ಶಿಕ್ಷೆಯನ್ನು ವಿಧಿಸಿದ್ದು, ಈ ಘಟನೆ ಮನುವಾದದ ಕೊಳಕು ಮುಖವನ್ನು ದೇಶದ ಮುಂದೆ ಬೆತ್ತಲು ಮಾಡಿದೆ.

ಜೋಗಿ ಸಮುದಾಯಕ್ಕೆ ಸೇರಿದ ಮಹಿಳೆ ತನ್ನ ಮೊದಲ ಪತಿಯ ಜೊತೆಗೆ ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣ ಎರಡನೇ ಮದುವೆಯಾಗಿದ್ದರು. ಮಹಿಳೆ ಎರಡನೇ ವಿವಾಹವಾಗುವಂತಿಲ್ಲ ಎಂದು ಸ್ಥಳೀಯ ಪಂಚಾಯತ್ ಸದಸ್ಯರು, ಸಭೆ ನಡೆಸಿ, ಮಹಿಳೆಯ ಸಹೋದರಿ, ಸಂಬಂಧಿಕರನ್ನು ಕರೆಸಿದ್ದಾರೆ.


Provided by

ಸಭೆಯಲ್ಲಿ ಮಾತನಾಡಿದ ಅವಿವೇಕಿ ಸದಸ್ಯರು, ಶಿಕ್ಷೆಯನ್ನೂ ಘೋಷಿಸಿದ್ದು, ಪಂಚಾಯತ್ ಸದಸ್ಯರು ಬಾಲೆ ಎಲೆಯ ಮೇಲೆ ಉಗುಳುತ್ತಾರೆ. ಆ ಉಗುಳನ್ನು ಎರಡನೇ ವಿವಾಹವಾಗಿರುವ ಮಹಿಳೆ ನೆಕ್ಕಬೇಕು ಎಂದು ಹೇಳಿದ್ದಾರೆ. ಇದರ ಜೊತೆಗೆ ಎರಡನೇ ಮದುವೆ ಮಾಡಿಕೊಂಡಿರುವುದಕ್ಕಾಗಿ ಪಂಚಾಯತ್ ಗೆ 1 ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಹೇಳಿದ್ದಾರೆ.

ಮಹಿಳೆಯ ಸಹೋದರಿ ಮನೆಗೆ ಬಂದು ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದರಿಂದ ಶಾಕ್ ಗೊಳಗಾದ ಮಹಿಳೆ, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪಂಚಾಯತ್ ಸದಸ್ಯರ ವಿರುದ್ಧ ವಿವಿಧ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೇಶದಲ್ಲಿ ಕೆಲವರು ಆಗಾಗ ಸಂವಿಧಾನ ಬದಲಾಗಬೇಕು ಎಂದು ಹೇಳುತ್ತಿರುವುದು ವರದಿಯಾಗುತ್ತಿದೆ. ಆದರೆ  ಸಂವಿಧಾನ ಇಲ್ಲದೇ ಇದ್ದರೆ, ದೇಶದ ಜನರ ಪರಿಸ್ಥಿತಿ ಇದೇ ರೀತಿಯಾಗಿರುತ್ತದೆ. ಮಾನವೀಯತೆ ಇಲ್ಲದ ಮನುವಾದಿಗಳು ಹೇಳಿದಂತೆ ಕೇಳುವ ಗುಲಾಮೀಯ ಸ್ಥಿತಿ ದೇಶದಲ್ಲಿ ಮತ್ತೆ ಬರಬಹುದು.

ಇತ್ತೀಚಿನ ಸುದ್ದಿ