ಬಿಗ್ ಬಾಸ್ ನಿಂದ ಅರ್ಧದಲ್ಲೇ ಹೊರ ಬರಬೇಕು ಅಂದ್ರೆ 3 ಕೋಟಿ ಪರಿಹಾರ ಕೊಡಬೇಕು: ಆರ್ಯವರ್ಧನ್ ಗುರೂಜಿ ಆರೋಪ

05/01/2024
ಬೆಂಗಳೂರು: ಬಿಗ್ ಬಾಸ್ ಶೋ ಬಗ್ಗೆ ಮಾಜಿ ಸ್ಪರ್ಧೆ ಆರ್ಯವರ್ಧನ್ ಗುರೂಜಿ ವಾಹಿನಿಯೊಂದರಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದು, ಬಿಗ್ ಬಾಸ್ ನಲ್ಲಿ ಊಟ, ತಿಂಡಿ ಪ್ಯಾಕೇಜ್ ನಲ್ಲಿ ಪ್ರತೀ ತಿಂಗಳು 1 ರಿಂದ ಒಂದೂವರೆ ಲಕ್ಷ ಉಳಿತಾಯ ಮಾಡ್ತಾರೆ. ಹೊಟ್ಟೆ ತುಂಬಾ ಊಟ ಕೊಡಲ್ಲ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿ ಡ್ರೋಣ್ ಪ್ರತಾಪ್ ಆತ್ಮಹತ್ಯೆ ಯತ್ನ ಎಂಬ ವದಂತಿಯ ಬೆನ್ನಲ್ಲೇ, ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಆರ್ಯವರ್ಧನ್, ಬಿಗ್ ಬಾಸ್ ನಿಂದ ಅರ್ಧದಿಂದಲೇ ಬಿಟ್ಟು ಹೋಗ್ತೀನಿ ಅಂತ ಹೇಳಿದ್ರೆ, ಬಿಟ್ಟೋದ್ರೆ 3 ಕೋಟಿ ಪರಿಹಾರ ಕೊಡಬೇಕು ಎಂದು ಸಣ್ಣದಾಗಿ ಬರೆಸಿ ಸಹಿ ಹಾಕಿಸಿಕೊಂಡಿರ್ತಾರೆ ಎಂದು ಆರೋಪಿಸಿದ್ದಾರೆ.
ಮನೆಯಲ್ಲಿರುವಾಗ ಸರಿಯಾಗಿ ಊಟ, ತಿಂಡಿ ಇಲ್ಲದೇ ಬಿಪಿ ಹೆಚ್ಚು ಕಡಿಮೆ ಆಗಿ ಏನಾದ್ರೂ ಆದರೆ ಯಾರು ಹೊಣೆ? ಹಾಗಾಗಿ ಬಿಗ್ ಬಾಸ್ ಒಂದು ದಂಧೆ ಹೊರತು ಮತ್ತೇನೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.