3 ದಿನಗಳ ಅಂತರದಲ್ಲಿ ತಾಯಿ -ಮಗಳು ಕೊರೊನಾಕ್ಕೆ ಬಲಿ

rajeswari sushma
05/06/2021

ಶಿವಮೊಗ್ಗ: ಮೂರು ದಿನಗಳ ಅಂತರದಲ್ಲಿ ಕೊರೊನಾಗೆ ತಾಯಿ-ಮಗಳು ಬಲಿಯಾಗಿರುವ ಘಟನೆ ಶಿವಮೊಗ್ಗದಿಂದ ವರದಿಯಾಗಿದ್ದು,  ಮಂಗಳವಾರ ಮಗಳು ಸಾವನ್ನಪ್ಪಿದ್ದರೆ,  ತಾಯಿ ನಿನ್ನೆ ರಾತ್ರಿ ಕೊವಿಡ್ ಗೆ ಬಲಿಯಾಗಿದ್ದಾರೆ.

ಶಿವಮೊಗ್ಗ ಹೊರ ವಲಯದ ಮಲವಗೊಪ್ಪದ ತಾಯಿ ರಾಜೇಶ್ವರಿ ಹಾಗೂ ಅವರ ಪುತ್ರಿ ಸುಷ್ಮಾ ಕೊರೊನಾಕ್ಕೆ ಬಲಿಯಾದವರಾಗಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲು ಮಗಳು ಸುಷ್ಮಾಗೆ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ತಾಯಿಗೆ ಸೋಂಕು ತಗುಲಿದೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ತಾಯಿ ಹಾಗೂ ಮಗಳು ಇಬ್ಬರೂ ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version