3 ದಿನಗಳಿಂದಲೂ ಆಸ್ಪತ್ರೆಯ ಕೊಠಡಿಯಲ್ಲಿ ಕೊಳೆಯುತ್ತಿದೆ 30 ಮೃತದೇಹಗಳು! - Mahanayaka
4:37 AM Wednesday 5 - February 2025

3 ದಿನಗಳಿಂದಲೂ ಆಸ್ಪತ್ರೆಯ ಕೊಠಡಿಯಲ್ಲಿ ಕೊಳೆಯುತ್ತಿದೆ 30 ಮೃತದೇಹಗಳು!

mortuary
20/04/2021

ಅಹ್ಮದಾಬಾದ್:  ಪ್ರಧಾನಿ ನರೇಂದ್ರ ಮೋದಿ ಅವರ ತವರಾದ ಗುಜರಾತ್ ನ ಆಸ್ಪತ್ರೆಯೊಂದರಲ್ಲಿ ಕಳೆದ ಮೂರು ದಿನಗಳಿಂದ  30ಕ್ಕೂ ಅಧಿಕ ಮೃತದೇಹಗಳು ಕೊಳೆಯುತ್ತಿದೆ.

ಗುಜರಾತ್ ನ ವಲ್ಸಾದ್ ಸಿವಿಲ್ ಆಸ್ಪತ್ರೆಯಲ್ಲಿ ಪಾರದರ್ಶಕ ಪ್ಲಾಸ್ಟಿಕ್  ಚೀಲಗಳಲ್ಲಿ ಕಟ್ಟಿ, ರಾಸಾಯನಿಕಗಳನ್ನು ಸಿಂಪಡಿಸಿದ ಸುಮಾರು 30 ಮೃತದೇಹಗಳನ್ನು ಆಸ್ಪತ್ರೆಯೊಳಗೆ ಕೊಳೆಯಲು ಬಿಡಲಾಗಿದೆ. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಕೂಡ ಆಸ್ಪತ್ರೆ ಮುಂದಾಗಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೋವಿಡ್ ಮಾರ್ಗಸೂಚಿಯಂತೆ ಸೋಂಕಿನಿಂದ ಮೃತಪಟ್ಟವರನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವುದಿಲ್ಲ. ಆಸ್ಪತ್ರೆ ಕಡೆಯಿಂದಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹೀಗಾಗಿ ಮೃತರ ಕೋವಿಡ್ ವರದಿಗಳು ಇನ್ನೂ ಬರದ ಕಾರಣ ಮೃತದೇಹಗಳನ್ನು ಇನ್ನೂ ಹಸ್ತಾಂತರಿಸಿಲ್ಲ ಎಂದು ಆಸ್ಪತ್ರೆಯ ಆಡಳಿತ ತಿಳಿಸಿದೆ.

ಇತ್ತೀಚಿನ ಸುದ್ದಿ