ರಾತ್ರಿ 3 ಗಂಟೆಗೆ ಎದ್ದು ಎದೆಯನ್ನು ಒತ್ತಿ ಹಿಡಿದಂತಾಗುತ್ತಿದೆ ಎಂದು ಅಮ್ಮನಿಗೆ ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

sidharth shukla
03/09/2021

ಬಿಗ್ ಬಾಸ್ ಸೀಸನ್ 13ರ ವಿಜೇತ, ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ 40ರ ವಯಸ್ಸಿನಲ್ಲಿ ನಿಧನರಾಗಿದ್ದು,  ಆ ದಿನ (ಸೆ.2) ರಾತ್ರಿ ಏನೆಲ್ಲ ಘಟನೆ ನಡೆದಿತ್ತು ಎನ್ನುವುದು ಇದೀಗ  ಬೆಳಕಿಗೆ ಬಂದಿದ್ದು, ರಾತ್ರಿಯೇ ಶುಕ್ಲಾಗೆ ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಅವರು ಬದುಕುವ ಸಾಧ್ಯತೆಗಳಿದ್ದವು ಎನ್ನಲಾಗುತ್ತಿದೆ.

40ರ ವಯಸ್ಸಿನಲ್ಲಿ ಫಿಟ್ ಆಗಿದ್ದ ಸಿದ್ಧಾರ್ಥ್ ಗೆ ಹೃದಯಾಘಾತವಾಗಬಹುದು ಎನ್ನುವುದನ್ನು ಯಾರು ಕೂಡ ಊಹಿಸಲೂ ಸಾಧ್ಯವಾಗಿರಲಿಲ್ಲ. ಸ್ವತಃ ಅವರ ಕುಟುಂಬಸ್ಥರು ಕೂಡ ಇದನ್ನು ನಿರೀಕ್ಷಿಸಿರಲು ಸಾಧ್ಯವಿಲ್ಲ. ಆದರೆ, ಕೊನೆಗೂ ಎಲ್ಲರಿಗೂ ಆಘಾತವನ್ನು ನೀಡಿ ಸಿದ್ಧಾರ್ಥ್ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಸೆ.2ರಂದು ರಾತ್ರಿ ಸುಮಾರು 3 ಗಂಟೆಯ ವೇಳೆಗೆ ಸಿದ್ಧಾರ್ಥ್ ಗೆ ಏಕಾಏಕಿ ಎಚ್ಚರವಾಗಿದೆ. ದೇಹದಲ್ಲಿ ಏನೋ ಬದಲಾವಣೆಯಾಗುತ್ತಿದೆ ಎನ್ನುವುದು ಅವರಿಗೆ ತಿಳಿದಿತ್ತು. ಆ ವೇಳೆಗೆ ತಾಯಿಯನ್ನು ಕೂಡ ಕರೆದಿದ್ದಾರೆ. ತಾಯಿ ಎದ್ದು ಬಂದಾಗ, ಎದೆಯಲ್ಲಿ ಏನೋ ಒತ್ತಿ ಹಿಡಿದಂತೆ ಆಗುತ್ತಿದೆ ಎಂದು ಹೇಳಿದ್ದರಂತೆ.

ಆರೋಗ್ಯವಂತ ಮಗನಿಗೆ ಏನೂ ಆಗಲ್ಲ ಎನ್ನುವುದು ತಾಯಿಯ ಧೈರ್ಯವಾಗಿತ್ತು. ಹಾಗಾಗಿ ಅವರು ಕುಡಿಯಲು ನೀರು ಕೊಟ್ಟು, ಏನೂ ಆಗುವುದಿಲ್ಲ ಎಂದು ಸಮಾಧಾನಪಡಿಸಿ ಮಲಗಿಸಿ ತೆರಳಿದ್ದಾರೆ. ಆದರೆ ಬೆಳಗ್ಗೆ ತಾಯಿ ಎಬ್ಬಿಸಿದರೂ ಸಿದ್ಧಾರ್ಥ್ ಎದ್ದೇಳಲೇ ಇಲ್ಲ. ತಕ್ಷಣವೇ ಸಿದ್ಧಾರ್ಥ್ ನ ಸಹೋದರರಿಗೆ ತಾಯಿ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸಿದ್ದಾರ್ಥ್ ನನ್ನು ಮೂರು ಬಾರಿ ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. ಮೂರು ಬಾರಿಯೂ ಸಿದ್ಧಾರ್ಥ್ ನ ನಾಡಿ ಮಿಡಿತ ವೈದ್ಯರಿಗೆ ಸಿಕ್ಕಿಲ್ಲ. ಹೃದಯ ಬಡಿತ ನಿಂತು ಬಹಳಷ್ಟು ಸಮಯವಾಗಿದೆ ಎನ್ನುವುದು ವೈದ್ಯರಿಗೂ ತಿಳಿದಿದೆ. ಅಂತಿಮವಾಗಿ 10:15ಕ್ಕೆ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಜಾಮೀನಿನಲ್ಲಿ ಹೊರ ಬಂದ ಲೈಂಗಿಕ ಕಿರುಕುಳದ ಆರೋಪಿ ಸಂತ್ರಸ್ತೆಯನ್ನು ಗುಂಡಿಟ್ಟು ಕೊಂದ!

ಪಬ್ ನಲ್ಲಿ ಅಪ್ರಾಪ್ತ ಬಾಲಕಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್: ಪಬ್ ಮ್ಯಾನೇಜ್ ಮೆಂಟ್ ಗೆ ಸಂಕಷ್ಟ!

‘ವಿಕ್ರಾಂತ್ ರೋಣ’: ಡೆಡ್ ಮ್ಯಾನ್ ಆಂಥಮ್ ಸೃಷ್ಟಿಸಿತು ಹೊಸ ಕುತೂಹಲ!

ಖಾಸಗಿ ವಾಹಿನಿ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡಲಾಗುತ್ತಿದೆ | ಸುಪ್ರೀಂ ಕೋರ್ಟ್ ಕಳವಳ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಪಿಎಸ್ ಐ ಅರ್ಜುನ್ ನನ್ನು ಬಂಧಿಸಿದ ಸಿಐಡಿ ಪೊಲೀಸರು

ಆತ್ಮಹತ್ಯೆ ಮಾಡಲು ನೀರಿಗೆ ಹಾರಿದ ಕುಡುಕನ ರಕ್ಷಣೆಗೆ ಹೋದ ಇಬ್ಬರು ಸಾವು | ಕುಡುಕ ಸೇಫ್!

ಇತ್ತೀಚಿನ ಸುದ್ದಿ

Exit mobile version