ಹಾಸ್ಟೆಲ್ ನ ಕಿಟಕಿ ಮುರಿದು ಪರಾರಿಯಾದ ಮೂವರು ವಿದ್ಯಾರ್ಥಿನಿಯರು

ಮಂಗಳೂರು: ಮಂಗಳೂರಿನ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನ ಕಿಟಕಿ ಮುರಿದು ಪರಾರಿಯಾದ ಘಟನೆ ನಡೆದಿದೆ.
ಮಂಗಳೂರಿನ ಖಾಸಗಿ ಪಿಯು ಕಾಲೇಜಿನ ಯಶಸ್ವಿನಿ, ಸಿಂಚನಾ, ದಕ್ಷತಾ ಎಂಬ ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಪರಾರಿಯಾದವರು ಎನ್ನಲಾಗಿದೆ.
ಪರಾರಿಯಾದ ವಿದ್ಯಾರ್ಥಿನಿಯರ ಪೈಕಿ ಯಶಸ್ವಿನಿ ಹಾಗೂ ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದು, ಸಿಂಚನಾ ಚಿತ್ರದುರ್ಗದ ವಿದ್ಯಾರ್ಥಿನಿಯಾಗಿದ್ದಾಳೆ.
ಮುಂಜಾನೆ ಮೂರು ಗಂಟೆಯ ವೇಳೆಗೆ ವಿದ್ಯಾರ್ಥಿನಿಯರು ಪರಾರಿಯಾಗಿದ್ದು, ನಾವು ಹೋಗುತ್ತಿದ್ದೇವೆ. ಕ್ಷಮಿಸಿ ಎಂದು ನೋಟ್ ಬರೆದಿಟ್ಟು ತೆರಳಿದ್ದಾರೆ. ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka