ಸಂಭಾಲ್ ಹಿಂಸಾಚಾರದ ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ವಿಚಾರಣಾ ಆಯೋಗ; ಇಂದು ಸುಪ್ರೀಂನಲ್ಲಿ ಸಮೀಕ್ಷೆ ಅರ್ಜಿ ವಿಚಾರಣೆ - Mahanayaka
9:24 PM Wednesday 5 - February 2025

ಸಂಭಾಲ್ ಹಿಂಸಾಚಾರದ ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ವಿಚಾರಣಾ ಆಯೋಗ; ಇಂದು ಸುಪ್ರೀಂನಲ್ಲಿ ಸಮೀಕ್ಷೆ ಅರ್ಜಿ ವಿಚಾರಣೆ

29/11/2024

ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಅಲಹಾಬಾದ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅರೋರಾ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ವಿಚಾರಣಾ ಆಯೋಗವನ್ನು ಸಂಭಾಲ್‌ನಲ್ಲಿ ನಡೆದ ಕಲ್ಲು ತೂರಾಟ ಘಟನೆಯ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಪ್ರಸಾದ್ ಮತ್ತು ನಿವೃತ್ತ ಐಪಿಎಸ್ ಅರವಿಂದ್ ಕುಮಾರ್ ಜೈನ್ ಅವರು ಆಯೋಗದ ಇತರ ಇಬ್ಬರು ಸದಸ್ಯರಾಗಿರುತ್ತಾರೆ.
ಮತ್ತೊಂದೆಡೆ, ಮಸೀದಿಯ ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯವು ನವೆಂಬರ್ 19 ರಂದು ನೀಡಿದ ಆದೇಶದ ವಿರುದ್ಧ ಉತ್ತರ ಪ್ರದೇಶದ ಸಂಭಾಲ್ ನ ಜಾಮಾ ಮಸೀದಿಯ ನಿರ್ವಹಣಾ ಸಮಿತಿಯು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಶುಕ್ರವಾರ ಸಂಭಾಲ್ ಜಾಮಾ ಮಸೀದಿಯ ಅರ್ಜಿಯ ವಿಚಾರಣೆ ನಡೆಸಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ