ಕೇಬಲ್ ಕಾರ್ ಡಿಕ್ಕಿ ಪ್ರಕರಣ: ಮೂವರು ಪ್ರವಾಸಿಗಳ ದಾರುಣ ಸಾವು - Mahanayaka
11:24 PM Thursday 12 - December 2024

ಕೇಬಲ್ ಕಾರ್ ಡಿಕ್ಕಿ ಪ್ರಕರಣ: ಮೂವರು ಪ್ರವಾಸಿಗಳ ದಾರುಣ ಸಾವು

cable car disaster
12/04/2022

ಜಾರ್ಖಂಡ್‌ ನ ದಿಯೋಘರ್‌ ನ ಬಾಬಾ ವೈದ್ಯನಾಥ ದೇವಸ್ಥಾನದ ಬಳಿ ರೋಪ್‌ ವೇಯಲ್ಲಿ ಎರಡು ಕೇಬಲ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.

40 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.  ಇನ್ನೂ 14 ಮಂದಿಯನ್ನು ರಕ್ಷಿಸಬೇಕಿದೆ.  ಇದುವರೆಗೆ ಒಟ್ಟು 38 ಮಂದಿಯನ್ನು ರಕ್ಷಿಸಲಾಗಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೇನ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ವಾಯುಪಡೆ, ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು  ಇಂದು ಸಂಜೆ ವೇಳೆಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  4 ಕೇಬಲ್ ಕಾರ್ ಗಳಲ್ಲಿ ಮಕ್ಕಳು ಸೇರಿದಂತೆ ಹಲವರು ಸಿಲುಕಿದ್ದು ಕಳೆದ ಕೆಲವು ಗಂಟೆಗಳಿಂದ ಆಹಾರ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ.

ಭಾನುವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಾಂತ್ರಿಕ ದೋಷದಿಂದ 12 ಕೇಬಲ್ ಕಾರುಗಳು ಡಿಕ್ಕಿ ಹೊಡೆದಿವೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ.ಇದು   ಖಾಸಗಿ ಕಂಪನಿ ನಡೆಸುತ್ತಿರುವ ರೋಪ್ ವೇ ಆಗಿದೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತ್ತೊಂದು ಎಲೆಕ್ಟ್ರಿಕ್ ಬೈಕ್ ದುರಂತ: ಕಂಟೈನರ್ ನೊಳಗಿದ್ದ 20 ಬೈಕ್ ಗಳು ಸುಟ್ಟು ಭಸ್ಮ

ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವ ಗಳಿಂದಲೇ ಚಾಲನೆ

ಪತ್ನಿ ಹೆರಿಗೆ ಕೊಠಡಿಯಲ್ಲಿ, ಪತಿ ಬಾರ್ ನಲ್ಲಿ, ಮಗ ರಸ್ತೆಯಲ್ಲಿ | ಮನಕಲಕುವ ಘಟನೆ

ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!

ಇತ್ತೀಚಿನ ಸುದ್ದಿ