ಆಟದ ಬಂದೂಕು ಎಂದು ತಿಳಿದು 13ರ ಬಾಲಕನಿಂದ ಫೈರಿಂಗ್: 3 ವರ್ಷದ ಬಾಲಕ ಸಾವು

ಮಂಡ್ಯ(Mandya): ಬಾಲಕನೊಬ್ಬ ಆಟವಾಡುತ್ತಾ, ಅಸಲಿ ಬಂದೂಕಿನಿಂದ ಫೈರಿಂಗ್(Firing) ಮಾಡಿರುವ ಪರಿಣಾಮ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ(Nagamangala) ತಾಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮೂರು ವರ್ಷದ ಮಗ ಅಭಿಷೇಕ್ ಫೈರಿಂಗ್ ಗೆ ಬಲಿಯಾದ ಬಾಲಕನಾಗಿದ್ದಾನೆ. ಈ ಕುಟುಂಬ ಕಾಂಗ್ರೆಸ್ ಮುಖಂಡ ನರಸಿಂಹ ಮೂರ್ತಿ ಎಂಬವರ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ದಂಪತಿಯನ್ನು ಭೇಟಿಯಾಗಲು ಭಾವ ಶಂಕರ್ ದಾಸ್ ಹಾಗೂ ಆತನ ಮಗ ಸುದೀಪ್ ದಾಸ್ ಬಂದಿದ್ದರು. ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ 13 ವರ್ಷದ ಬಾಲಕ ಸುದೀಪ್ ಕೈಗೆ ನರಸಿಂಹಮೂರ್ತಿಯವರ ಬಂದೂಕು ಸಿಕ್ಕಿದೆ.
ಬಂದೂಕು ಅಸಲಿ ಎನ್ನುವುದು ತಿಳಿಯದೇ ಬಾಲಕ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಅಭಿಷೇಕ್(3) ನ ಹೊಟ್ಟೆಗೆ ಗುಂಡು ಹೊಕ್ಕಿದೆ. ಮಗುವಿನ ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದಾರೆ. ಕೂಡಲೇ ಮಗುವನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂದೂಕು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: