ತಾಯಿ ಜೊತೆಗೆ ಜಮೀನಿಗೆ ಹೋಗ್ತಿದ್ದ ವೇಳೆ ನಡೀತು ಅವಘಡ: 40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಬಾಲಕ ಕೊನೆಗೂ ಪಾರು - Mahanayaka
5:58 AM Saturday 21 - September 2024

ತಾಯಿ ಜೊತೆಗೆ ಜಮೀನಿಗೆ ಹೋಗ್ತಿದ್ದ ವೇಳೆ ನಡೀತು ಅವಘಡ: 40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಬಾಲಕ ಕೊನೆಗೂ ಪಾರು

23/07/2023

40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಶಿವಂ ಕುಮಾರ್​ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಬಿಹಾರ ರಾಜ್ಯದ ನಳಂದಾ ಜಿಲ್ಲೆಯಲ್ಲಿ‌ ನಡೆದಿದೆ. ಬೋರ್​ವೆಲ್​ನಿಂದ ಹೊರತೆಗೆಯುತ್ತಿದ್ದಂತೆ ವೈದ್ಯರ ತಂಡ ಶಿವಂನನ್ನು ತಪಾಸಣೆ ನಡೆಸಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಬಾಲಕನನ್ನು ರಕ್ಷಿಸಿದ ನಂತರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಶಿವಂನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಗಂಟೆಗಳ ಕಾಲ ಬೋರ್​ವೆಲ್​ನಲ್ಲಿನ ಕೆಸರಿನಲ್ಲಿ ಸಿಲುಕಿದ್ದ ಹಿನ್ನೆಲೆ ಪ್ರಥಮ ಚಿಕಿತ್ಸೆ ಬಹಳ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.

ದೋಮನ್ ಮಾಂಝಿ ಅವರ ಮೂರು ವರ್ಷದ ಮಗ ಶಿವಂ ಭಾನುವಾರ ತನ್ನ ತಾಯಿಯೊಂದಿಗೆ ಜಮೀನಿಗೆ ಹೋಗುತ್ತಿದ್ದ. ಈ ವೇಳೆ ಆಟವಾಡುತ್ತಾ ಬೋರ್‌ವೆಲ್‌ನಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿದ ತಾಯಿ ಕೂಗಾಡಿದ್ದಾರೆ. ಕ್ಷಣಾರ್ಧದಲ್ಲೇ ವಿಷಯ ಹಬ್ಬಿತು. ಜಿಲ್ಲಾಡಳಿತದಿಂದ ಜೆಸಿಬಿ ಯಂತ್ರ ಅಳವಡಿಸಿ ಮಣ್ಣು ಅಗೆಯುವ ಕಾರ್ಯ ಆರಂಭಿಸಲಾಯಿತು. ಕಾರ್ಯಾಚರಣೆಯ ಉದ್ದಕ್ಕೂ ಬಾಲಕನಿಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗಿತ್ತು. ಇದನ್ನು ಸಿಸಿ ಕ್ಯಾಮೆರಾದ ಮೂಲಕ ಮೇಲ್ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎನ್ ಡಿಆರ್ ಎಫ್ ತಂಡ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದೆ.


Provided by

ಎನ್‌ ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಆರೇಳು ಜೆಸಿಬಿಗಳ ಸಹಾಯದಿಂದ ಭೂಮಿ ಕೊರೆದು ಬಾಲಕನನ್ನು ರಕ್ಷಿಸಿವೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಶುಭಂಕರ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ