15 ದಿನದಲ್ಲಿ 30 ಜನರು ಸಸ್ಪೆಂಡ್: ಡಿಸಿಎಂ ಡಿಕೆಶಿ ವಿರುದ್ಧ ಮುನಿರತ್ನ ಕಿಡಿ

ಬೆಂಗಳೂರು: ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. 15 ದಿನದಲ್ಲಿ 30 ಜನರು ಸಸ್ಪೆಂಡ್ ಆಗಿದ್ದು, ಈ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಡಿಸಿಎಂ ಡಿಕೆಶಿ ಅವರ ಜೊತೆ ಚರ್ಚೆಗೆ ಅವಕಾಶ ಕೇಳಿದ್ದೇನೆ. ಅವರು ಅವಕಾಶ ಕೊಟ್ಟಾಗ ಸದನದಲ್ಲಿ ಮಾತನಾಡುತ್ತೇನೆ. ಒಂದು ವಿಕೆಟ್ ಮಿಸ್ ಆಗಿದೆ, ಅದನ್ನು ತೆಗೆಯಬೇಕು ಎಂದಿದ್ದಾರೆ. ಅವರು ಕ್ರಿಕೆಟ್ ಪ್ಲೇಯರ್, ಅವರು ಹೊಡೀತಾರೆ. ನಾನೊಂದು ಮಿಸ್ ಆಗಿದ್ದೀನಿ, ಅವರು ಆಡಲಿ ನೋಡೋಣ ಎಂದು ಅವರು ಹೇಳಿದರು.
ತಮ್ಮ ಮೇಲಿನ ಎಫ್ ಐಆರ್ ವಿಚಾರವಾಗಿ ಮಾತನಾಡಿದ ಶಾಸಕ ಮುನಿರತ್ನ, ನಾನು ಗಣಿಗಾರಿಕೆ ವೃತ್ತಿ ಮಾಡೋನು ಅಲ್ಲ. ಗಣಿಗಾರಿಕೆ ವೃತ್ತಿ ನನಗೆ ಗೊತ್ತಿಲ್ಲ. ನಾನು 25 ವರ್ಷಗಳ ಹಿಂದೆ ಖರೀದಿಸಿದ ಜಾಗದಲ್ಲಿ ಪಾಯ ತೆಗೆದಿದ್ದೇನೆ.ನಾನು 25 ವರ್ಷಗಳ ಹಿಂದೆ ಖರೀದಿಸಿದ ಜಾಗದಲ್ಲಿ ಪಾಯ ತೆಗೆದಿರೋದೇ ಗಣಿಗಾರಿಕೆನಾ? ಕಟ್ಟಡ ಕಟ್ಟಲು ಪಾಯ ಅಗೆಯೋದು ತಪ್ಪಾ? ಇಷ್ಟಕ್ಕೇ ದೂರು ಕೊಟ್ಟು ಎಫ್‌ಐಆರ್ ಹಾಕಿಸಿದ್ದಾರೆ. ಇದು ಸರ್ಕಾರಿ ಜಾಗ ಅಲ್ಲ, ನಾನೇ ಖರೀದಿಸಿದ ಜಾಗ ಎಂದು ಸ್ಪಷ್ಟನೆ ನೀಡಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw