ಈ ಬಾರಿಯ ಹಜ್ ಯಾತ್ರಿಕರಿಗೆ ಮತ್ತಷ್ಟು ವ್ಯವಸ್ಥೆ: ಯಾತ್ರಿಕರಿಗೆ ಆಹಾರ ತಯಾರಿಸಲಿದ್ದಾರೆ ಸೌದಿಯ 30ರಷ್ಟು ಶೆಫ್ ಗಳು
ಈ ಬಾರಿಯ ಹಜ್ ಸಮಯದಲ್ಲಿ ಯಾತ್ರಿಕರಿಗೆ ಸೌದಿಯ 30ರಷ್ಟು ಶೆಫ್ ಗಳು ಆಹಾರವನ್ನು ತಯಾರಿಸಲಿದ್ದಾರೆ ಎಂದು ವರದಿಯಾಗಿದೆ. ಯಾತ್ರಿಕರಿಗೆ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಗತ್ಯವಾದ ಲೈಸೆನ್ಸ್ ಗಳನ್ನು ಜಿದ್ದಾ ಸೂಪರ್ ಡೋಮ್ ನಲ್ಲಿ ನಡೆದ ಹಜ್ ಸಭೆಯಲ್ಲಿ ಸೌದಿಗಳಾದ 30ರಷ್ಟು ಪುರುಷ ಮತ್ತು ಸ್ತ್ರೀ ಶೆಪ್ ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಹಜ್ ಸೀಸನ್ ನಲ್ಲಿ ಯಾತ್ರಿಕರಿಗೆ ಆಹಾರವನ್ನು ನೀಡುವುದು ಮತ್ತು ಅಡುಗೆ ತಯಾರಿಸುವ ಇತ್ಯಾದಿ ಜಗತ್ತಿಗೆ ಪ್ರವೇಶಿಸುವುದಕ್ಕಾಗಿ ಸೌದಿಗಳನ್ನು ದತ್ತು ಪಡೆಯಲು ಮತ್ತು ಅದಕ್ಕೆ ಯೋಗ್ಯರನ್ನಾಗಿ ಮಾಡುವ ಗುರಿಯೊಂದಿಗೆ ಹಜ್ ಶೆಪ್ ಕಾರ್ಯಕ್ರಮ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಹಜ್ ಯಾತ್ರಿಕರಿಗಾಗಿ ಆಹಾರ ತಯಾರಿಸುವ ಮತ್ತು ಅದನ್ನು ವಿತರಿಸುವ ವಿಷಯದಲ್ಲಿ ಸೌದಿ ಯುವಕರನ್ನು ಪ್ರೇರೇಪಿಸುವನ್ನು ಸೌದಿ ಅರೇಬಿಯಾ ಗುರಿಯಾಗಿ ಇಟ್ಟುಕೊಂಡಿದೆ. ಸೌದಿಯ ವಿಷನ್ ಟ್ವೆಂಟಿ ಥರ್ಟಿಯ ಭಾಗವಾಗಿ ಕ್ವಾಲಿಟಿ ಆಫ್ ಲೈಫ್ ಎಂಬ ಒಂದು ಗುರಿಯೂ ಇದೆ ಅದನ್ನು ಈಡೇರಿಸುವ ಹಿನ್ನೆಲೆಯಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj