30ಕ್ಕೂ ಅಧಿಕ ಮಂಗಗಳನ್ನು ಕೊಂದು ರಸ್ತೆ ಬದಿ ಎಸೆದ ಪಾಪಿಗಳು!
ಹಾಸನ: ಸುಮಾರು 30ಕ್ಕೂ ಅಧಿಕ ಮಂಗಳಗಳನ್ನು ಕೊಂದು ರಸ್ತೆ ಬದಿಯಲ್ಲಿ ಬಿಸಾಡಿರುವ ಘಟನೆ ಹಾಸನದ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ನಡೆದಿದ್ದು, ಘಟನೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಗಳಿಗೆ ವಿಷ ಆಹಾರ ನೀಡಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾತ್ರೋ ರಾತ್ರಿ ಮಂಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಎಸೆಯಲಾಗಿದೆ ಎಂದು ಹೇಳಲಾಗಿದ್ದು, ಈ ವೇಳೆ ಕೆಲವು ಮಂಗಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದವು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೇರೆ ಯಾವುದೋ ಪ್ರದೇಶದಲ್ಲಿ ಮಂಗಗಳನ್ನು ಹತ್ಯೆ ಮಾಡಿ, ಈ ಪ್ರದೇಶದಲ್ಲಿ ತಂದು ಹಾಕಲಾಗಿದೆ ಎಂದು ಹೇಳಲಾಗಿದೆ. ಮೂಕ ಪ್ರಾಣಿಗಳ ಮೇಲೆ ಈ ರೀತಿಯ ಕ್ರೌರ್ಯ ಮೆರೆದಿರುವವರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ
ಅರ್ಚಕ ನೀಡಿದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ ಭೇದಿ | 20ಕ್ಕೂ ಅಧಿಕ ಅಸ್ವಸ್ಥ