ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ 33 ವಿದ್ಯಾರ್ಥಿಗಳಿಗೆ ರಾಜ್ಯದ ಮೊದಲ 10 ಸ್ಥಾನ

expert
09/04/2025

ಮಂಗಳೂರು: ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 599 ಅಂಕ ಪಡೆದ ಎಕ್ಸ್‌ ಪರ್ಟ್ ಪ.ಪೂ. ಕಾಲೇಜಿನ ಅಮೂಲ್ಯಾ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

1,634 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ.99ಕ್ಕಿಂತ ಅಧಿಕ ಅಂಕಗಳನ್ನು 10 ವಿದ್ಯಾರ್ಥಿಗಳು ಪಡೆದ್ದಾರೆ. ಅದೇ ರೀತಿ ಶೇ. 98ಕ್ಕಿಂತ ಅಧಿಕ 55, ಶೇ.97ಕ್ಕಿಂತ ಅಧಿಕ 138, ಶೇ.96ಕ್ಕಿಂತ ಅಧಿಕ 264, ಶೇ. 95ಕ್ಕಿಂತ ಅಧಿಕ 379 ವಿದ್ಯಾರ್ಥಿಗಳು ಪಡೆದರೆ, ಶೇ.90ಕ್ಕಿಂತ ಅಧಿಕ 966, ಶೇ.85ಕ್ಕಿಂತ ಅಧಿಕ 1,265 ಹಾಗೂ ಶೇ.80ಕ್ಕಿಂತ ಅಧಿಕ 1,429 ವಿದ್ಯಾರ್ಥಿಗಳು ಪಡೆದಿದ್ದಾರೆ. ಪರೀಕ್ಷೆ ಬರೆದ 1,634 ವಿದ್ಯಾರ್ಥಿಗಳಲ್ಲಿ 1,627  ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  ಮೊದಲ ಹತ್ತು ಸ್ಥಾನವನ್ನು ಸಂಸ್ಥೆಯ 33 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಎಕ್ಸ್‌ ಪರ್ಟ್ ಸಂಸ್ಥೆ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಮಲ್ಲಾಂಬಿಕಾ, ವಿಸ್ಮಯ ಹಿರೇಮಠ, ಪ್ರೇಕ್ಷಾ ಅವಭ್ರತ–ಎಲ್ಲರೂ 594, ಲಿಖಿತಾ ಕೆ.ಎಸ್. 593, ಪ್ರಗತಿ ಎಂ.ಡಿ., ಯಶಸ್ ಗೌಡ ಎಚ್.ಪಿ., ಎನ್.ಬಿ. ಸಾನಿಕಾ, ಹನಿಷ್ಕಾ ಶೆಟ್ಟಿ, ಶಾರ್ವರಿ, ಶ್ರೇಯಾನ್ ಕೆ., ಅವನೀಶ್ ಬಿ., ಕಾರ್ತಿಕೇಯ ಆರ್. ಮಯ್ಯ-ಎಲ್ಲರೂ 592,, ನೂತನ್ ಲೋಕೇಶ್, ಭುವನ, ಸಾನ್ವಿ ಎಸ್. ಗೌಡ, ಶ್ರೀಹರ್ಷ ಎಚ್.ವೈ, ಭವಧರಣಿ ಜಿ., ಹೀರ್ ರೆನೀಶ್ ದೇಡಾಕಿಯಾ, ಅಸ್ಮಿತಾ ಶೆಟ್ಟಿ-ಎಲ್ಲರೂ 591, ಪ್ರಜ್ವಲ್ ಕುಮಾರ್ ವಿ.ಎಸ್, ತನ್ವಿ ಹೇಮಂತ್, ಲಿಖಿಲ್ ಸೊನ್ನದ್, ಎಂ. ಮಮತಾ, ವಿಕಾಸ್ ಎಸ್. ಪೊಲೀಸ್ ಪಾಟೀಲ್, ಜಾನ್ಹವಿ ಶೆಣೈ ಹಾಗೂ ನಿಧಿ ಕೆ.ಜಿ.590 ಅಂಕ ಗಳಿಸಿದ್ದಾರೆ. ಅಮೂಲ್ಯ ಕಾಮತ್ ಅವರ ಸಾಧನೆ ಅಭೂತಪೂರ್ವವಾದುದು. ಮೊದಲ 10 ಸ್ಥಾನದಲ್ಲಿ ಸಂಸ್ಥೆಯ 33 ವಿದ್ಯಾರ್ಥಿ ಗಳು ಇರುವುದು ಖುಷಿ ತಂದಿದೆ ಎಂದಿರುವ ಅವರು, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಪ್ರತೀ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲದೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿರುವ ಸಂಸ್ಥೆ ಈ ವರ್ಷವೂ ಅದೇ ಸಾಧನೆ ತೋರಿದೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version