ಬೀದಿ ನಾಯಿಗಳನ್ನು ಹುಡುಕಿಕೊಟ್ಟರೆ 35 ಸಾವಿರ ರೂ. ಬಹುಮಾನ! - Mahanayaka
9:57 PM Thursday 12 - December 2024

ಬೀದಿ ನಾಯಿಗಳನ್ನು ಹುಡುಕಿಕೊಟ್ಟರೆ 35 ಸಾವಿರ ರೂ. ಬಹುಮಾನ!

viplavi mahendra
05/11/2023

ಬೆಂಗಳೂರು: ಕಾಣೆಯಾಗಿರುವ ಬೀದಿ ನಾಯಿಗಳ ಪತ್ತೆಗೆ 35 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ಬೆಂಗಳೂರು ನಗರದ ಕುಮಾರಪಾರ್ಕ್  ಬಳಿ ನಾಪತ್ತೆಯಾಗಿರುವ 3 ಬೀದಿ ನಾಯಿಗಳಿಗಾಗಿ  ಈ ಹುಡುಕಾಟ ನಡೆಸಲಾಗುತ್ತಿದ್ದು,ಕಾಣೆಯಾದ ನಾಯಿಗಳ ಪತ್ತೆಗೆ 4 ತಂಡಗಳಿಂದ ತೀವ್ರ ಶೋಧ ನಡೆಸಲಾಗುತ್ತಿದೆ.

ಕುಮಾರಪಾರ್ಕ್ ಬಳಿ ಕಳೆದ 10 ವರ್ಷದಿಂದ ಇದ್ದ ಈ 3 ಬೀದಿ ನಾಯಿಗಳನ್ನು ವಕೀಲೆ ವಿಪ್ಲವಿ ಮಹೇಂದ್ರ ಅವರು ಪೋಷಣೆ ಮಾಡುತ್ತಿದ್ದರು. ನಾಯಿಗಳಿಗೆ  ಲೋಬಿ, ದಂತ, ರಿಬಾ ಎಂದು ಹೆಸರಿಡಲಾಗಿತ್ತು.

ಸದ್ಯ ವಿಪ್ಲವಿ ಮಹೇಂದ್ರ ಇಂಗ್ಲೆಂಡ್‌ ನಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಕಚೇರಿ ಸಿಬ್ಬಂದಿಯಿಂದ ನಾಯಿಗಳ ಪೋಷಣೆ ಮಾಡಲಾಗುತ್ತಿತ್ತು. ವಿಶೇಷವೆಂದರೆ ಈ 3 ನಾಯಿಗಳಿಂದ ಈ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ಅಷ್ಟಾಗಿ ಆಗುತ್ತಿರಲಿಲ್ಲ. ಆದರೆ ಅಕ್ಟೋಬರ್ 4 ರಿಂದ 20 ರ ಈ ದಿನಗಳ ನಡುವೆ ಈ 3 ನಾಯಿಗಳು ಕಣ್ಮರೆಯಾಗಿವೆ.

ಕಣ್ಮರೆಯಾಗಿರುವ 3 ಬೀದಿ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಚೇರಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ